ಹಿಂದು ರುದ್ರಭೂಮಿಗೆ ಜಮೀನು ದಾನ

4-ANP-P3 LAND DONATE
ಆನಂದಪುರ ಸಮೀಪದ ಗೌತಮಪುರದಲ್ಲಿ ಹಿಂದು ರುದ್ರಭೂಮಿಗೆ ದಾಸನ್ ಹುಚ್ಚಪ್ಪ ಅವರ ಮಕ್ಕಳು ಜಮೀನು ದಾನ ಮಾಡಿದರು. ಈರಪ್ಪ ಗೌಡ, ಎಚ್.ಮಂಜುನಾಥ್, ಎಚ್.ಕೃಷ್ಣಮೂರ್ತಿ, ಎಚ್.ಪ್ರಕಾಶ್ ಇತರರರಿದ್ದರು.
Published on

ಆನಂದಪುರ: ಗೌತಮಪುರದ ದಾಸನ್ ಹುಚ್ಚಪ್ಪ ಅವರು ಸಮಾಜ ಸೇವೆ ಮೂಲಕ ಬದುಕು ಸಾರ್ಥಕಗೊಳಿಸಿಕೊಂಡಿದ್ದಾರೆ ಎಂದು ಗೌತಮಪುರ ಗ್ರಾಪಂ ಮಾಜಿ ಸದಸ್ಯ ಈರಪ್ಪ ಗೌಡ ಹೇಳಿದರು.

ದಾಸನ್ ಹುಚ್ಚಪ್ಪ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿ, ಹುಚ್ಚಪ್ಪ ಅವರು ಗ್ರಾಮದ ದೇವಾಲಯ ಜೀರ್ಣೋದ್ಧಾರ, ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸ, ಬಡ ರೋಗಿಗಳ ಚಿಕಿತ್ಸೆಗೆ ಆರ್ಥಿಕ ಸಹಾಯ, ಶಾಲೆಗಳಿಗೆ ಮೂಲ ಸೌಕರ್ಯ ಅಭಿವೃದ್ಧಿ ಸೇರಿ ಅನೇಕ ಸೇವಾ ಚಟುವಟಿಕೆಗಳನ್ನು ನಡೆಸಿದ್ದರು ಎಂದು ಸ್ಮರಿಸಿದರು.

ಗ್ರಾಮದ ಮಾರಿಕಾಂಬಾ ಸಮಿತಿ ಅಧ್ಯಕ್ಷ ಬಿ.ತಿಮ್ಮಪ್ಪ ಮಾತನಾಡಿ, ಹುಚ್ಚಪ್ಪ ಅವರ ಮಕ್ಕಳಾದ ದಾಸನ್ ಎಚ್.ಮಂಜುನಾಥ, ದಾಸನ್ ಎಚ್.ಕೃಷ್ಣಮೂರ್ತಿ, ದಾಸನ್ ಎಚ್.ಪ್ರಕಾಶ್ ಅವರು ತಂದೆಯ ಸ್ಮರಣಾರ್ಥ ಹಿಂದು ರುದ್ರಭೂಮಿ ನಿರ್ಮಿಸಲು ಒಂದು ಎಕರೆ 10 ಗುಂಟೆ ಜಮೀನು ದಾನವಾಗಿ ನೀಡಿರುವುದು ಶ್ಲಾಘನೀಯ ಎಂದರು.

ಮಾರಿಕಾಂಬಾ ಸಮಿತಿ ಉಪಾಧ್ಯಕ್ಷ ಎಲ್.ಸುಬ್ಬಪ್ಪ, ಕೋಡಕಣಿ ಹುಚ್ಚಪ್ಪ, ದ್ಯಾವಣಪ್ಪ, ಕರಿಯಪ್ಪ, ಗಂಗಾಧರ, ಮಂಜುನಾಥ ಮುಳಕೇರಿ, ಮಳ್ಳದ ಮಂಜಪ್ಪ, ನಿವೃತ್ತ ದೈಹಿಕ ಶಿಕ್ಷಕ ಬೆಳ್ಳಿಯಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net