ವೈವಿಧ್ಯ ಧಾರ್ಮಿಕ ಪರಂಪರೆಯ ತವರು ಭಾರತ

3sor1
ಸೊರಬ ತಾಲೂಕಿನ ಬಂಕಸಾಣ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶಿವರಾತ್ರಿಯ ಶಿವ ಸಂಭ್ರಮ ಕಾರ್ಯಕ್ರಮವನ್ನು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಉದ್ಘಾಟಸಿದರು. ಶ್ರೀ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಇತರರಿದ್ದರು.
Published on

ಸೊರಬ: ಭಾರತ ದೇಶ ಧಾರ್ಮಿಕ ಪರಂಪರೆಯ ತವರೂರು. ವೈವಿಧ್ಯ ಪ್ರಾಂತ್ಯಗಳು ಒಂದು ಸೂತ್ರದಲ್ಲಿ ಬೆಸೆದುಕೊಂಡಿದೆ. ಸಂತರು ಸಮಾಜ ಸುಧಾರಣೆಯ ಮಹತ್ತರ ಪಾತ್ರ ನಿರ್ವಹಿಸಿದರು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ತಾಲೂಕಿನ ಬಂಕಸಾಣ ಗ್ರಾಮದಲ್ಲಿ ಶ್ರೀ ಸಮಾಧಾನ ವರದಾ ಉತ್ತರ ಈಶಾನ್ಯ ವಾಹಿನಿ, ಜಡೆ ಹಿರೇಮಠ ಹಾಗೂ ಶ್ರೀ ಸದ್ಗುರು ಸೇವಾ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಶಿವರಾತ್ರಿಯ ಶಿವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಕ್ತರಿಗೆ ಗುರುಗಳ ಮಾರ್ಗದರ್ಶನ ಸದಾ ಇರುತ್ತದೆ ಎಂದು ತಿಳಿಸಿದರು.

ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ ಮಾತನಾಡಿ, ಶಿವ, ಶಿವ ಎಂದರೆ ಮೋಕ್ಷ ಖಚಿತ. ಬಸವಣ್ಣ ಅವರ ಕಾಲದಲ್ಲಿದ್ದ ದಾಸೋಹ ನೆನಪಿಸುವಂತಿದೆ. ಮುಂದಿನ ದಿನಗಳಲ್ಲಿ ವರದಾ-ದಂಡಾವತಿ ನದಿಯ ಸಂಗಮ ಕ್ಷೇತ್ರ ಬಹು ದೊಡ್ಡ ಕ್ಷೇತ್ರವಾಗಲಿದೆ ಎಂದರು.

ಲಕ್ಕವಳ್ಳಿ ಜೈನಮಠದ ಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಸೊರಬ ತಾಲೂಕು ಆಧ್ಯಾತ್ಮಿಕ ಕ್ಷೇತ್ರವಾಗಬೇಕು. ಮೌನದಿಂದ ಏನೆಲ್ಲಾ ಸಾಧನೆ ಮಾಡಬಹುದೆಂದು ತಪಸ್ವಿಗಳು ತೋರಿಸಿದ್ದಾರೆ ಎಂದು ಹೇಳಿದರು.

ಮೌನತಪಸ್ವಿಗಳ ಆಜ್ಞೆಯಂತೆ ಕ್ಷೇತ್ರದಲ್ಲಿ ಕಾರ್ಯಗಳು ನಡೆಯುತ್ತಿವೆ. ಲೋಕಸಭಾ ಸದಸ್ಯರು ಮೊದಲು ನೀಡಿದ 50 ಲಕ್ಷ ರೂ. ಅನುದಾನ, ಭಕ್ತರ ದೇಣಿಗೆಯಲ್ಲಿ ಮಠ ನಿರ್ಮಾಣವಾಗಿದೆ. ಶಿವ ಧ್ಯಾನದಿಂದ ಮನಸ್ಸಿಗೆ ಸಮಾಧಾನ, ಉಲ್ಲಾಸ ಲಭಿಸುತ್ತದೆ. ಶಿವ ಸ್ಮರಣೆಯ ಪುಣ್ಯ ಪರ್ವಕಾಲದಲ್ಲಿ ಶಿವಮಂತ್ರ ಜಪಿಸಬೇಕು. ಘನಬಸವ ಅಮರೇಶ್ವರ ಶ್ರೀಗಳು ಸೊರಬ

ಗೊಗ್ಗೇಹಳ್ಳಿ ಪಂಚಮಠದ ಶ್ರೀ ಸಂಘಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಋಷಿಕೇಶದ ಶ್ರೀ ರುದ್ರಮುನಿ ದೇವರು, ಮೂಡಿ ಶಿವಲಿಂಗೇಶ್ವರ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕ್ಯಾಸನೂರಿನ ಶ್ರೀ ಗುರುಬಸವ ಪಂಡಿತಾರಾಧ್ಯ ಸ್ವಾಮೀಜಿ, ಕೋಣಂದೂರಿನ ಶ್ರೀಪತಿ ಪಂಡಿತಾರಾಧ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ನಿಂಬಾಳದ ಮೌನತಪಸ್ವಿ ಜಡೆ ಶ್ರೀ ಶಾಂತಲಿಂಗೇಶ್ವರ ಸ್ವಾಮೀಜಿ ದೇಶಕ್ಕೆ ಮಾದರಿ ಸಂತರಾಗಿದ್ದಾರೆ. ಕ್ಷೇತ್ರ ಮುಂದಿನ ದಿನಗಳಲ್ಲಿ ಬಹುದೊಡ್ಡ ಧಾರ್ಮಿಕ ಕ್ಷೇತ್ರವಾಗಲಿದೆ. ರುದ್ರಪ್ಪ ಲಮಾಣಿ ಉಪಸಭಾಪತಿ

ಚಂದ್ರಶೇಖರ, ಸರೋಜಮ್ಮ ಬಿರಾದರ, ಗುರುಪ್ರಸಾದ ಗೌಡ, ನಾಗಪ್ಪ ಗೌಡ, ರವಿ, ಪಾಂಡುರಂಗ ಕಾಮತ್, ರಾಜಶೇಖರ ಗೌಡ, ಮಹೇಶ, ಡಿ.ಎಸ್.ಶಂಕರ್ ಶೇಟ್, ಯು.ಎನ್.ಲಕ್ಷ್ಮೀಕಾಂತ ಸೇರಿದಂತೆ ಹಲವರಿಗೆ ಶ್ರೀಮಠದಿಂದ ಗೌರವಿಸಲಾಯಿತು. ಸಿ.ಪಿ.ಈರೇಶಗೌಡ, ಚಂದ್ರಶೇಖರ ನಿಜಗುಣ, ನಾಗರಾಜ ಗುತ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net