ಭಕ್ತಿ, ಶ್ರದ್ಧೆ ಇದ್ದರೆ ಜೀವನದಲ್ಲಿ ಉನ್ನತ ಸಾಧನೆ

4 sgr 2
ಸಾಗರದ ಮಹಾಗಣಪತಿ ದೇವಸ್ಥಾನ ಆವರಣದಿಂದ ಇಡುಗುಂಜಿಗೆ ಹೊರಟಿರುವ ಪಾದಯಾತ್ರಿಗಳು. ಪ್ರಮುಖರಾದ ರಾಘವೇಂದ್ರ, ಅಶೋಕ್, ಮಂಜುನಾಥ್, ನಾರಾಯಣ, ವಾಸುದೇವ, ರೆಡ್ಡಿ, ಪ್ರಶಾಂತ್, ನಾಗರಾಜ್, ಸಂದೀಪ್ ಇತರರಿದ್ದರು.
Published on

ಸಾಗರ: ಭಕ್ತಿ ಮತ್ತು ಶ್ರದ್ಧೆ ಇದ್ದರೆ ಮಾತ್ರ ಸಾಧನೆ ಸಾಧ್ಯ. ಸತತ 18 ವರ್ಷ ಇಡುಗುಂಜಿಗೆ ಪಾದಯಾತ್ರೆ ಮಾಡಿರುವುದು ಶ್ಲಾಘನೀಯ ಎಂದು ದೈವಜ್ಞ ಸಮಾಜದ ಅಧ್ಯಕ್ಷ ಮೋಹನ್ ಶೇಟ್ ಹೇಳಿದರು.

ಶುಕ್ರವಾರ ಸಾಗರದ ಮಹಾಗಣಪತಿ ದೇವಸ್ಥಾನ ಆವರಣದಲ್ಲಿ ಇಡುಗುಂಜಿ ಪಾದಯಾತ್ರಿಗಳ ಬಳಗದಿಂದ ಹಮ್ಮಿಕೊಂಡಿದ್ದ 19ನೇ ವರ್ಷದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.

ದೈವಜ್ಞ ಸಮಾಜದವರು ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಜತೆಗೆ ಎಲ್ಲ ಸಮಾಜದವರು ಹೆಜ್ಜೆ ಹಾಕುತ್ತಿರುವುದು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಪಾದಯಾತ್ರೆ ಮೂಲಕ ಇಡುಗುಂಜಿ ದೇವರ ದರ್ಶನಕ್ಕೆ ಹೋಗುತ್ತಿರುವುದು ಶ್ರದ್ಧೆ ಮತ್ತು ಭಕ್ತಿ ಸಂಕೇತ ಎಂದು ತಿಳಿಸಿದರು.

ಬಳಗದ ಪ್ರಮುಖರಾದ ಜಗದೀಶ್ ಜಿ.ಕುರ್ಡೇಕರ್ ಮಾತನಾಡಿ, 19 ವರ್ಷದ ಹಿಂದೆ ಒಬ್ಬರಿಂದ ಪಾದಯಾತ್ರೆ ಪ್ರಾರಂಭವಾಗಿ ಈಗ ಸಂಖ್ಯೆ 120ಕ್ಕೆ ತಲುಪಿದೆ. ಸಾಗರ ಮತ್ತು ಅಕ್ಕಪಕ್ಕದ ಜಿಲ್ಲೆಗಳಿಂದಲೂ ಪಾದಯಾತ್ರಿಗಳು ಹೆಜ್ಜೆ ಹಾಕುತ್ತಿದ್ದಾರೆ. ಪಾದಯಾತ್ರೆಯಲ್ಲಿ ಪಾಲ್ಗೊಂಡವರ ಮನಸ್ಸಿನ ಅಭೀಷ್ಟೆಗಳು ಈಡೇರಿವೆ. ಪ್ರತಿವರ್ಷ ಜನವರಿ ಮೊದಲ ವಾರದಲ್ಲಿ ಪಾದಯಾತ್ರೆ ನಡೆಸುತ್ತೇವೆ ಎಂದರು. ಪ್ರಮುಖರಾದ ರಾಘವೇಂದ್ರ, ಅಶೋಕ್, ಮಂಜುನಾಥ್, ನಾರಾಯಣ, ವಾಸುದೇವ, ರೆಡ್ಡಿ, ಪ್ರಶಾಂತ್, ನಾಗರಾಜ್, ಸಂದೀಪ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net