

ಶಿಕಾರಿಪುರ: ಪ್ರತಿಯೊಬ್ಬರೂ ಹಕ್ಕು ಬಾಧ್ಯತೆಗಳ ಅರಿವು ಹೊಂದಿರಬೇಕು. ಜನರಲ್ಲಿ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಮಾನವ ಹಕ್ಕುಗಳ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ ಎಂದು ಡಬ್ಲುೃಎಚ್‌ಆರ್‌ಆರ್‌ಕೆ ಫೌಂಡೇಷನ್ ಕಾನೂನು ಸಲಹೆಗಾರ ಎಂ.ಎಸ್.ಬಡಿಗೇರ್ ಹೇಳಿದರು.
ಡಬ್ಲುೃಎಚ್‌ಆರ್‌ಆರ್‌ಕೆ ಫೌಂಡೇಷನ್ ವಿಶ್ವ ಮಾನವ ಹಕ್ಕುಗಳ ಸಂಸ್ಥೆಯಿಂದ ಶಿಕಾರಿಪುರದಲ್ಲಿ ಆಯೋಜಿಸಿದ್ದ ತಾಲೂಕು ಘಟಕದ ಪದಾಧಿಕಾರಿಗಳ ಪದವಿ ಸ್ವೀಕಾರ ಹಾಗೂ ಐಡಿ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಶೋಷಿತರು, ತುಳಿತಕ್ಕೆ ಒಳಗಾದವರು ಸಂಸ್ಥೆಗೆ ಅರ್ಜಿ ಸಲ್ಲಿಸಿದರೆ ಸೂಕ್ತ ನ್ಯಾಯ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಪ್ರಧಾನ ಕಾರ್ಯದರ್ಶಿ ಎಚ್.ಸಿ.ಸುದರ್ಶನ್ ಮಾತನಾಡಿ, ಸಂಸ್ಥೆಯನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬೆಳೆಸಲು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದರು. ತಾಲೂಕು ಘಟಕದ ಪದಾಧಿಕಾರಿಗಳಿಗೆ ಐಡಿ ಕಾರ್ಡ್ ವಿತರಿಸಲಾಯಿತು.
ಫೌಂಡೇಷನ್ ದಕ್ಷಿಣ ವಿಭಾಗದ ಉಪಾಧ್ಯಕ್ಷೆ ಶ್ವೇತಾ ಶೆಟ್ಟಿ, ಸಂಸ್ಥೆ ತಾಲೂಕು ಅಧ್ಯಕ್ಷ ಆರ್.ಪಿ.ಮಂಜುನಾಥ್, ಶ್ವೇತಾ ಜಿ.ಎನ್.ಆಚಾರ್ಯ, ದಕ್ಷಿಣ ಜನರಲ್ ಸೆಕ್ರೆಟರಿ ಮೌನೇಶ್ ಬಡಿಗೇರ್, ಜಂಟಿ ಕಾರ್ಯದರ್ಶಿ ಲಕ್ಷ್ಮೀ, ಉಮೇಶ್ ಭಟ್, ವೈಭವ್, ಬಸವರಾಜ್ ಇತರರಿದ್ದರು.