ಸಮುದಾಯ ಭವನಕ್ಕೆ ಅನುದಾನ ಮಂಜೂರು

8 skp 4
ಶಿಕಾರಿಪುರದ ತಾಳಗುಂದ ದೇವಾಲಯಕ್ಕೆ ಧರ್ಮಸ್ಥಳ ಯೋಜನೆಯ ಸಹಾಯಧನದ ಪತ್ರವನ್ನು ಸಮಿತಿ ಉಪಾಧ್ಯಕ್ಷ ಷಣ್ಮುಖಪ್ಪ ಮತ್ತು ಕಾರ್ಯದರ್ಶಿ ರಾಮಪ್ಪ ಅವರಿಗೆ ನೀಡಲಾಯಿತು. ಮಂಜುನಾಥ್, ಸುಧಾ, ಚಂದ್ರಪ್ಪ, ಧರ್ಮಪ್ಪ ಇತರರಿದ್ದರು.
Published on

ಶಿಕಾರಿಪುರ: ಸಾಮಾಜಿಕ ಕಳಕಳಿ, ದೂರದೃಷ್ಟಿಯಿಂದ ಧರ್ಮಸ್ಥಳದ ಡಾ. ವೀರೇಂದ್ರ ಹೆಗ್ಗಡೆ ಅವರು ರೂಪಿಸಿದ ಯೋಜನೆಗಳು ಜನಸ್ನೇಹಿಯಾಗಿವೆ ಎಂದು ಸಿದ್ದರಾಮೇಶ್ವರ ದೇವಸ್ಥಾನ ಸಮಿತಿ ಉಪಾಧ್ಯಕ್ಷ ಷಣ್ಮುಖಪ್ಪ ಹೇಳಿದರು.

ತಾಳಗುಂದ ಗ್ರಾಮದ ಸಿದ್ದರಾಮೇಶ್ವರ ದೇವಸ್ಥಾನದ ಸಮುದಾಯ ಭವನಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 1.50 ಲಕ್ಷ ರೂ. ಮಂಜೂರಾತಿ ಪತ್ರ ಸ್ವೀಕರಿಸಿ ಮಾತನಾಡಿ, ಮಹಿಳಾ ಸ್ವಾವಲಂಬನೆ, ಕೃಷಿ, ಶಿಕ್ಷಣ, ಆರೋಗ್ಯ, ಪರಿಸರ ಸೇರಿ ಹತ್ತಾರು ಕ್ಷೇತ್ರಗಳಲ್ಲಿ ಯೋಜನೆ ವ್ಯಾಪ್ತಿ ವಿಸ್ತರಿಸಿಕೊಂಡಿದೆ. ಧಾರ್ಮಿಕ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡುತ್ತಿದೆ. ಶ್ರೀ ಸಿದ್ದರಾಮೇಶ್ವರ ದೇಗುಲಕ್ಕೆ ಅನುದಾನ ನೀಡಿರುವುದು ಭಕ್ತರಿಗೆ ಸಂತಸ ತಂದಿದೆ ಎಂದು ತಿಳಿಸಿದರು.

ಸಮಿತಿ ಕಾರ್ಯದರ್ಶಿ ರಾಮಪ್ಪ, ಪ್ರಮುಖರಾದ ಚಂದ್ರಪ್ಪ, ಧರ್ಮಪ್ಪ, ಮಂಜುನಾಥ, ಗಣೇಶಪ್ಪ, ವೀರಭದ್ರಪ್ಪ, ವಲಯದ ಮೇಲ್ವಿಚಾರಕ ಮಂಜುನಾಥ್, ಸೇವಾ ಪ್ರತಿನಿಧಿ ಸುಧಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net