ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸೌಲಭ್ಯ

16-ANP-P1
ಆನಂದಪುರ ಸಮೀಪದ ಹೊಸೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ನಲಿಕಲಿ ಕ್ರಿಯಾಶೀಲ ತಾರೆಯರ ತಂಡದಿಂದ ನೋಟ್‌ಬುಕ್ ವಿತರಿಸಲಾಯಿತು.
Published on

ಆನಂದಪುರ: ಶಿವಮೊಗ್ಗ ಜಿಲ್ಲಾ ನಲಿಕಲಿ ಕ್ರಿಯಾಶೀಲ ತಾರೆಯರ ತಂಡದಿಂದ ವಿವಿಧ ಶಾಲೆಗಳ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಿಸಲಾಯಿತು.

ಬೆಂಗಳೂರಿನ ಅಲೆಜಿಯನ್ ಕಂಪನಿ ಮತ್ತು ಆರ್.ಕೆ.ಫೌಂಡೇಷನ್ ಸಹಕಾರ ಪಡೆದು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಕಾರ್ಯಕ್ರಮ ನಡೆಸಲಾಯಿತು.

ಆನಂದಪುರ ಮತ್ತು ಆಚಾಪುರ ಕ್ಲಸ್ಟರ್ ವ್ಯಾಪ್ತಿ 600 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಲಾಯಿತು. ಕೆಲ ಆಯ್ದ ಶಾಲೆಗಳಿಗೆ ಬಣ್ಣ ಬಣ್ಣಗಳಿಂದ ಕೂಡಿರುವ ನಲಿ ಕಲಿ ಟೇಬಲ್ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net