ಗಣೇಶ ವಿಸರ್ಜನೆ ಕುಣಿದು ಕುಪ್ಪಳಿದ ಬಿವೈಆರ್

4 smg 13
Published on

ಶಿವಮೊಗ್ಗ: ನಗರದ ಹೊಸಮನೆ ಬಡಾವಣೆಯಲ್ಲಿ ಭಾನುವಾರ ರಾತ್ರಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರು ಗಣೇಶೋತ್ಸವ ಮೆರವಣಿಗೆ ವೇಳೆ ಭಕ್ತರೊಂದಿಗೆ ಕುಣಿದು ಕುಪ್ಪಳಿಸಿದರು.

ಭಾನುವಾರ ಸಂಜೆ ಐದನೇ ದಿನ ಮೆರೆವಣಿಗೆ ವೇಳೆ ಹೊಸಮನೆ 1ನೇ ಕ್ರಾಸ್‌ನ ಹಿಂದು ವಿರಾಟ್ ಸೇವಾ ಸಮಿತಿ ನೇತೃತ್ವದಲ್ಲಿ ಹೊರಟ ವಿಘ್ನ ನಿವಾರಕನ ಮೆರವಣಿಗೆಯಲ್ಲಿ ಭಾಗಿಯಾದ ರಾಘವೇಂದ್ರ ಅವರು ಭಕ್ತರೊಂದಿಗೆ ಹೆಜ್ಜೆ ಹಾಕಿ ಖುಷಿಪಟ್ಟರು.

ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಿದ ಬಳಿಕ ಭಕ್ತರು ಮತ್ತು ಅವರ ಅಭಿಮಾನಿಗಳ ಒತ್ತಾಸೆಗೆ ಮಣಿದು ಹೆಜ್ಜೆ ಹಾಕಿರುವ ವಿಡಿಯೋ ವೈರಲ್ ಆಗಿದೆ. ಕೆಲವೇ ಸೆಕೆಂಡ್ ಕುಣಿದಿದ್ದು ಹಿಂದು ವಿರಾಟ್ ಸೇವಾ ಸಮಿತಿಯವರು ಶಿಳ್ಳೆ, ಕೇಕೆ ಹಾಕುವ ಮೂಲಕ ರಾಘವೇಂದ್ರ ಅವರ ನೃತ್ಯವನ್ನು ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net