ಉತ್ಸವಗಳಿಂದ ಸಾಂಪ್ರದಾಯಕ ಕಲೆಗಳಿಗೆ ಪ್ರೋತ್ಸಾಹ

16sgr2
ಸಾಗರದಲ್ಲಿ ಆಯೋಜಿಸಿದ್ದ ವೇದನಾದ ಪ್ರತಿಷ್ಠಾನ ರಜತ ಮಹೋತ್ಸವದಲ್ಲಿ ಕಟ್ಟಿನಕೆರೆ ಸುಬ್ಬರಾವ್ ದಂಪತಿಯನ್ನು ಸನ್ಮಾನಿಸಲಾಯಿತು. ಜಿ.ಎಸ್.ಹೆಗಡೆ, ಶ್ರೀಧರ ಹೆಗಡೆ, ಅನಂತಮೂರ್ತಿ ಹೆಗಡೆ, ವಸುಧಾ ಶರ್ಮ, ದೀಪಕ್ ಸಾಗರ್ ಇತರರಿದ್ದರು.
Published on

ಸಾಗರ: ಸಾಂಪ್ರದಾಯಕ ಕಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಉತ್ಸವಗಳಿಂದ ಆಗುತ್ತದೆ ಎಂದು ಸಪ್ತಕ ಸಂಸ್ಥೆ ಮುಖ್ಯಸ್ಥ ಜಿ.ಎಸ್.ಹೆಗಡೆ ಹೇಳಿದರು.

ಸಾಗರದಲ್ಲಿ ವೇದನಾದ ಪ್ರತಿಷ್ಠಾನ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ನಾಲ್ಕು ದಿನಗಳ ರಾಷ್ಟ್ರೀಯ ಸಂಗೀತೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಲಲಿತ ಕಲೆಗಳಿಗೆ ಅದ್ಭುತ ಶಕ್ತಿ ಇರುವುದನ್ನು ಸಂಗೀತೋತ್ಸವಗಳು ಸಾಬೀತುಪಡಿಸುತ್ತವೆ ಎಂದು ತಿಳಿಸಿದರು.

ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಮಾತನಾಡಿ, ಮನುಷ್ಯ ಸದಾ ಜೀವನ್ಮುಖಿ ಆಗಿರಬೇಕು. ಒಳ್ಳೆಯ ಸಹವಾಸ, ಸಂಸ್ಕಾರ ನಮ್ಮಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸುತ್ತವೆ. ಸಂಗೀತ ಎಂಬುದು ಮನುಷ್ಯನ ಅಂತರಂಗ ಮತ್ತು ಬಹಿರಂಗ ಶುದ್ಧಿಗೊಳಿಸುತ್ತದೆ ಎಂದರು.

ವಿದುಷಿ ವಸುಧಾ ಶರ್ಮ ಮಾತನಾಡಿ, ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡುವ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ವಿಶೇಷ ಉತ್ಸವ ಆಯೋಜಿಸಲಾಗುವುದು ಎಂದು ತಿಳಿಸಿದರು. ಪತ್ರಕರ್ತ ದೀಪಕ್ ಸಾಗರ್ ಮಾತನಾಡಿ, ಹೆಸರಾಂತ ಕಲಾವಿದರು ರಾಷ್ಟ್ರೀಯ ಉತ್ಸವದಲ್ಲಿ ಕಾರ್ಯಕ್ರಮ ನೀಡುತ್ತಿರುವುದು ಮಕ್ಕಳ ಕಲಿಕೆಗೆ ಪೂರಕವಾಗಿದೆ ಎಂದು ಹೇಳಿದರು.

ಸಿದ್ದಾರ್ಥ ಬೆಳ್ಮಣ್ಣು, ಅಮಿತ್ ನಾಡಿಗ್ ಅವರ ಗಾನ ವೇಣು ಜುಗಲ್ಬಂದಿ, ಪ್ರವೀಣ್ ಗೋಡ್ಖಿಂಡಿ ಮತ್ತು ಷಡಜ್ ಗೋಡ್ಖಿಂಡಿ ಅವರ ಬಾನ್ಸುರಿ ಜುಗಲ್ಬಂದಿ, ಮಂಜುಷಾ ಪಾಟೀಲ್ ಕುಲಕರ್ಣಿ ಹಿಂದುಸ್ತಾನಿ ಗಾಯನ ಜನರ ಮೆಚ್ಚುಗೆಗೆ ಪಾತ್ರವಾಯಿತು. ಸಂಸ್ಥೆ ಹಿತೈಷಿ ಕಟ್ಟಿನಕೆರೆ ಸುಬ್ಬರಾವ್ ದಂಪತಿಯನ್ನು ಸನ್ಮಾನಿಸಲಾಯಿತು. ವೇದನಾದ ಪ್ರತಿಷ್ಠಾನ ಅಧ್ಯಕ್ಷ ಶ್ರೀಧರ ಹೆಗಡೆ, ಪ್ರಮುಖರಾದ ನರಸಿಂಹಮೂರ್ತಿ ಶರ್ಮ, ಐ.ವಿ.ಹೆಗಡೆ, ಗುರುದತ್ತ ಶರ್ಮ, ರಮೇಶ್ ಹೆಗಡೆ ಗುಂಡೂಮನೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net