

ಹೊಸನಗರ: ತಾಲೂಕಿನ ನೂಲಿಗ್ಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಂಗ್ಲ ಮಾಧ್ಯಮ ತರಗತಿಯನ್ನು ಬುಧವಾರ ಆರಂಭಿಸಲಾಯಿತು.
ಗ್ರಾಪಂ ಸದಸ್ಯ ಎಂ.ವಿಶ್ವನಾಥ ಮಾತನಾಡಿ, ಶಾಲೆಯಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣಕ್ಕೆ ಒತ್ತು ನೀಡಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವಪ್ಪ ಮಳಲಿ ಮಾತನಾಡಿ, ಆಂಗ್ಲ ಮಾಧ್ಯಮ ವ್ಯವಸ್ಥೆ ಕಲ್ಪಿಸಿದರೆ ಸಾಲದು, ಪೂರಕವಾಗಿ ಶಿಕ್ಷಕರನ್ನು ಒದಗಿಸಬೇಕು. ಶಿಕ್ಷಕರ ಕೊರತೆ ನಡುವೆ ಇರುವ ಶಿಕ್ಷಕರನ್ನೇ ಬಿಎಲ್‌ಒ ಸೇರಿ ಇತರ ಕೆಲಸಕ್ಕೆ ನಿಯೋಜಿಸಿದರೆ ತರಗತಿ ನಡೆಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಉಪಾಧ್ಯಕ್ಷೆ ಅನ್ನಪೂರ್ಣಾ, ಗ್ರಾಪಂ ಸದಸ್ಯೆ ನಿರ್ಮಲಾ, ಶಿಕ್ಷಣ ಇಲಾಖೆ ಅಧಿಕಾರಿಗಳಾದ ವಿನಯ್, ನಾಗರಾಜ ವಾರಂಬಳ್ಳಿ, ಮುಖ್ಯಶಿಕ್ಷಕಿ ಪ್ರಮೀಳಾ, ಪ್ರಮುಖರಾದ ರಾಜೇಶ, ಬಾಲಕೃಷ್ಣ, ಸಂತೋಷ, ಚಿದು, ರಾಘವೇಂದ್ರ ಇತರರಿದ್ದರು.