ಛಾಯಾಗ್ರಹಣದಿಂದ ಮಹತ್ತರ ಸಂಗತಿಗಳ ದಾಖಲೀಕರಣ

25sor1 (1)
ಸೊರಬದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದಿಂದ ಏರ್ಪಡಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆಯಲ್ಲಿ ಬಸವರಾಜ್ ಹಾಗೂ ಹೋಮೇಶಪ್ಪ ಅವರನ್ನು ಸನ್ಮಾನಿಸಲಾಯಿತು. ಈಶ್ವರಪ್ಪ, ವಿಜಯಕುಮಾರ್ ದಟ್ಟೇರ್ ಇತರರಿದ್ದರು.
Published on

ಸೊರಬ: ಸಮಾಜದ ಪ್ರಮುಖ ಸಂಗತಿಗಳನ್ನು ದಾಖಲಿಸಿ ಇತಿಹಾಸ ರೂಪಿಸುವ ಅದ್ಭುತ ಮಾಧ್ಯಮ ಛಾಯಾಗ್ರಹಣ ಎಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ವಿಜಯಕುಮಾರ್ ದಟ್ಟೇರ್ ಹೇಳಿದರು.

ಪಟ್ಟಣದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದಿಂದ ಆಯೋಜಿಸಿದ್ದ 186ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 1826ರಲ್ಲಿ ಜಗತ್ತಿನ ಮೊದಲ ಫೋಟೋ ಸಂಶೋಧನೆ ಆರಂಭಗೊಂಡು 1839ರಲ್ಲಿ ್ರಾನ್ಸ್ ಆಕಾಡೆಮಿ ಆ್ ಸೈನ್ಸ್ ಡ್ಯಾಗೈಎರೋಟೈಪ್ ಎಂಬ ಮೊದಲ ಛಾಯಾಚಿತ್ರ ತಂತ್ರಜ್ಞಾನವನ್ನು ಪ್ರಪಂಚಕ್ಕೆ ಪರಿಚಯಿಸಿದರು ಎಂದು ತಿಳಿಸಿದರು.

ಪ್ರಸ್ತುತ ಮುಂದುವರಿದ ತಂತ್ರಜ್ಞಾನದ ನಡುವೆಯೂ ಸಾಂಪ್ರದಾಯಿಕ ಛಾಯಾಗ್ರಾಹಕರು ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ. ವಿವಿಧ ಘಟನಾವಳಿಗಳಲ್ಲಿ ಛಾಯಾಗ್ರಾಹಕರು ಸೂಕ್ಷ್ಮ ಕೌಶಲದಿಂದ ಚಿತ್ರೀಕರಣ ಮಾಡುತ್ತಾರೆ ಎಂದರು.

ತಾಲೂಕು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಈಶ್ವರಪ್ಪ ಕೆರೆಕೊಪ್ಪ ಮಾತನಾಡಿ, ಸಂಘವು ಬಲಗೊಳ್ಳಬೇಕಿದೆ. ತಾಲೂಕಿನ ಎಲ್ಲ ಛಾಯಾಗ್ರಾಹಕರು ಸಂಘದ ಸದಸ್ಯತ್ವ ಪಡೆದು ಗುರುತಿನ ಚೀಟಿಯನ್ನು ಕಡ್ಡಾಯವಾಗಿ ಧರಿಸಬೇಕು. ಎಲ್ಲರೂ ಏಕರೂಪದ ಬೆಲೆ ಸೇವೆಯೊಂದಿಗೆ ಜನರೊಂದಿಗೆ ವ್ಯವಹರಿಸಬೇಕು ಎಂದು ತಿಳಿಸಿದರು.

ಚನ್ನಾಪುರ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಹಾಲೇಶ್ ನವುಲೆ ಮಾತನಾಡಿ, ಛಾಯಾಗ್ರಾಹಕರ ಜೀವನ ಕಷ್ಟವಾಗಿದೆ. ಕಷ್ಟದ ದಿನಗಳಲ್ಲಿ ನೆರವಾಗಲು ಆಪತ್ತು ನಿಧಿ ಸ್ಥಾಪನೆ ನೀಡಲು ಸಲಹೆ ನೀಡಿದರು.

ಹಿರಿಯ ಛಾಯಾಗ್ರಾಹಕ ಬಸವರಾಜ್, ಅಂತಾರಾಷ್ಟ್ರೀಯ ಕ್ರೀಡಾಪಟು, ಪಿಡಿಒ ಹೋಮೇಶಪ್ಪ ಅವರನ್ನು ಸನ್ಮಾನಿಸಲಾಯಿತು. ಛಾಯಾಗ್ರಾಹಕ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ, ತಾಲೂಕು ಸಂಘದ ಗೌರವಾಧ್ಯಕ್ಷ ಶ್ರೀಪಾದ ಬಿಚ್ಚುಗತ್ತಿ, ಮಾಜಿ ಅಧ್ಯಕ್ಷ ಡಿ.ಲೋಕೇಶ್, ಕಾರ್ಯದರ್ಶಿ ಮೋಹನ್, ಖಜಾಂಚಿ ರಾಜು ಪೇಟ್ಕರ್, ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net