ಮೊಬೈಲ್ ದುಷ್ಪರಿಣಾಮ ಜಾಗೃತಿಗೆ ಸೈಕಲ್ ಯಾತ್ರೆ

21 TTH 01
ಮೊಬೈಲ್ ಪರಿಣಾಮಗಳ ಜಾಗೃತಿ ಮೂಡಿಸುತ್ತಿರುವ ಬೆಳಗಾವಿಯ ರಮೇಶ್ ಪೂಜಾರಿ ಅವರು ತೀರ್ಥಹಳ್ಳಿಗೆ ಭೇಟಿ ನೀಡಿದ ಸಂದರ್ಭ ತಾಲೂಕು ಕಸಾಪದಿಂದ ಗೌರವಿಸಲಾಯಿತು. ಟಿ.ವಿ.ಸತೀಶ್, ಟಿ.ಕೆ.ರಮೇಶ್ ಶೆಟ್ಟಿ, ಮಹಾಬಲೇಶ್ವರ ಹೆಗಡೆ ಇತರರಿದ್ದರು.
Published on

ತೀರ್ಥಹಳ್ಳಿ: ಪಟ್ಟಣದ ಶೀಬಿನಕೆರೆ ಶಾಲೆ ಮತ್ತು ಕೆಂದಾಳುಬೈಲು ಶಾಲೆ ವಿದ್ಯಾರ್ಥಿಗಳು ಮೊಬೈಲ್ ಬಳಸುವುದಿಲ್ಲ ಎನ್ನುವ ಪ್ರತಿಜ್ಞೆ ಸುದ್ದಿ ತಿಳಿದ ಬೆಳಗಾವಿಯ ರಮೇಶ್ ಪೂಜಾರಿ(75) ಎಂಬುವರು ತೀರ್ಥಹಳ್ಳಿವರೆಗೆ ಸೈಕಲ್ ಯಾತ್ರೆ ನಡೆಸಿದ್ದಾರೆ.

ಮಕ್ಕಳನ್ನು ಖುದ್ದಾಗಿ ಭೇಟಿ ಮಾಡಲು 335 ಕಿ.ಮೀ. ದೂರವನ್ನು ಸೈಕಲ್‌ನಲ್ಲಿ ಕ್ರಮಿಸಿದ್ದಾರೆ. ಮೂಲತಃ ಉಡುಪಿ ಜಿಲ್ಲೆ ಬೈಂದೂರಿನ ರಮೇಶ್ ಪೂಜಾರಿ ಪ್ರಸ್ತುತ ಸಂಕೇಶ್ವರದಲ್ಲಿ ನೆಲೆಸಿದ್ದಾರೆ. ಗುರುವಾರ ಶೀಬಿನಕೆರೆ ಶಾಲೆಗೆ ಭೇಟಿ ನೀಡಿ ಮಕ್ಕಳ ನಿರ್ಧಾರವನ್ನು ಅಭಿನಂದಿಸಿದ್ದಾರೆ.

ತಾಲೂಕು ಆರೋಗ್ಯ ಇಲಾಖೆ ನೌಕರರ ಸಂಘದ ಅಧ್ಯಕ್ಷ ಟಿ.ವಿ.ಸತೀಶ್ ಮತ್ತು ಸಮಾನ ಮನಸ್ಕರು ಅವರನ್ನು ಗೌರವಿಸಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಸಹ ಗೌರವ ಸ್ವೀಕರಿಸಿ ಮಾತನಾಡಿ, ಹೋರಾಟಕ್ಕೆ ಹೆಸರಾದ ಜಿಲ್ಲೆಯ ಮಕ್ಕಳ ಪ್ರಜ್ಞಾವಂತಿಕೆ ಅನುಕರಣೀಯ. ಕೆಂದಾಳುಬೈಲು ಶಾಲೆಗೆ ಶನಿವಾರ ಭೇಟಿ ನೀಡುತ್ತೇನೆ ಎಂದರು.

ಕಸಾಪ ತಾಲೂಕು ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಹಾಬಲೇಶ್ವರ ಹೆಗ್ಡೆ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್, ಸಂತೋಷ್, ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net