ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಮಹಿಳಾ ಸಾಮ್ರಾಜ್ಯ; ಮೇಯರ್ ಆಗಿ ಸುವರ್ಣಾ, ಉಪಮೇಯರ್ ಸುರೇಖಾ ಆಯ್ಕೆ

SMG
Published on

ಶಿವಮೊಗ್ಗ: ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಸರಳ ಬಹುಮತ ಹೊಂದಿರುವ ಬಿಜೆಪಿಯ ಸುವರ್ಣಾ ಶಂಕರ್ ಮೇಯರ್ ಹಾಗೂ ಸುರೇಖಾ ಮುರಳೀಧರ್ ಉಪಮೇಯರ್ ಆಗಿ ಆಯ್ಕೆಯಾದರು.

ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿಕೂಟದಿಂದ ಮೇಯರ್ ಸ್ಥಾನಕ್ಕೆ ಯಮುನಾ ರಂಗೇಗೌಡ, ಉಪಮೇಯರ್ ಸ್ಥಾನಕ್ಕೆ ಮೆಹಕ್ ಷರೀಫ್ ನಾಮಪತ್ರ ಸಲ್ಲಿಸಿದ್ದರು.

ಬಿಜೆಪಿ ಅಭ್ಯರ್ಥಿಗಳಿಗೆ 26 ಹಾಗೂ ಮೈತ್ರಿಕೂಟದ ಅಭ್ಯರ್ಥಿಗಳಿಗೆ 12 ಮತಗಳು ಲಭಿಸಿದವು.

ಸುವರ್ಣಾ ಶಂಕರ್ ಅವರ ಜಾತಿ ಪ್ರಮಾಣ ಪತ್ರ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವ ಕಾರಣ ತೀರ್ಪು ಬರುವವರೆಗೆ ಮಾತ್ರ ಮೇಯರ್ ಆಗಿ ಮುಂದುವರಿಯಲಿದ್ದಾರೆ.

ಒಂದುವೇಳೆ ತೀರ್ಪು ವಿರುದ್ಧವಾಗಿ ಬಂದರೆ ಅವರು ಅಧಿಕಾರ ಕಳೆದುಕೊಳ್ಳಲಿದ್ದಾರೆ ಎಂದು ಚುನಾವಣಾಧಿಕಾರಿ ಡಾ. ಎನ್.ವಿ. ಪ್ರಸಾದ್ ಪ್ರಕಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net