ಮಕ್ಕಳು ಮೊಬೈಲ್ ಬಳಸುವುದು ನಿಯಂತ್ರಣದಲ್ಲಿರಲಿ

09 HHR P 05
ಆನವೇರಿಯಲ್ಲಿ ಆಯೋಜಿಸಿದ್ದ ಮೊಬೈಲ್ ಬಳಕೆ ದುಷ್ಪರಿಣಾಮ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಬಸಮ್ಮ ಉದ್ಘಾಟಿಸಿದರು. ಸುಜಾತಾ ಗಿರೀಶ್, ಮಲ್ಲಿಕಾರ್ಜುನ್, ನರೇಶಪ್ಪ, ಮಧು ಇತರರಿದ್ದರು.
Published on

ಹೊಳೆಹೊನ್ನೂರು: ಗ್ರಾಮೀಣ ಭಾಗದಲ್ಲಿ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗುವಲ್ಲಿ ಸ್ವಸಹಾಯ ಸಂಘಗಳು ಮುಖ್ಯ ಪಾತ್ರ ವಹಿಸುತ್ತಿವೆ ಎಂದು ಗ್ರಾಪಂ ಉಪಾಧ್ಯಕ್ಷೆ ಸುಜಾತಾ ಗಿರೀಶ್ ಹೇಳಿದರು.

ಸಮೀಪದ ಆನವೇರಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದೊಂದಿಗೆ ಮೊಬೈಲ್ ಬಳಕೆ, ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮ ಹಾಗೂ ಪರಿಸರ ಜಾಗೃತಿ ಕುರಿತು ಆಯೋಜಿಸಿದ್ದ ಬೀದಿ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಗ್ರಾಮಗಳಲ್ಲಿ ಚಿಕ್ಕ ಮಕ್ಕಳಿಗೂ ಸುಲಭವಾಗಿ ತಂಬಾಕು ಉತ್ಪನ್ನ ಸಿಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಮಕ್ಕಳು ಮೊಬೈಲ್ ಬಳಸುವುದನ್ನು ಸಾಧ್ಯವಾದಷ್ಟು ತಡೆಗಟ್ಟಬೇಕು. ಪಾಲಕರು ಮಕ್ಕಳಿಗೆ ಪುಸ್ತಕಗಳನ್ನು ನೀಡಬೇಕು. ಸ್ವಚ್ಛತೆಯ ಅರಿವು ಮೂಡಿಸಬೇಕು. ಪಾಲಕರು ಮಕ್ಕಳ ಮುಂದೆ ದುಶ್ಚಟಗಳನ್ನು ಮಾಡಬಾರದು ಎಂದು ತಿಳಿಸಿದರು.

ಶಾಲಾ ವಲಯದಲ್ಲಿ ಗುಟ್ಖಾ ತಂಬಾಕು ಮಾರಾಟ ಮಾಡಬಾರದು. ಅಪ್ರಾಪ್ತರು ಅಪರಾಧ ಪ್ರಕರಣಗಳಲ್ಲಿ ತೊಡಗುತ್ತಿರುವುದು ಒಳ್ಳೆಯದಲ್ಲ. ಸಮಾಜದ ಬದಲಾವಣೆಗೆ ಪ್ರತಿಯೊಬ್ಬರ ಸಹಕಾರ ಅತಿ ಮುಖ್ಯ ಎಂದರು. ವಲಯ ಮೇಲ್ವಿಚಾರಕ ಮಲ್ಲಿಕಾರ್ಜುನ್, ಒಕ್ಕೂಟಗಳ ಅಧ್ಯಕ್ಷೆ ಬಸಮ್ಮ, ಮುಖ್ಯಶಿಕ್ಷಕ ನರೇಶಪ್ಪ, ಸೇವಾ ಪ್ರತಿನಿಧಿ ಮಧು, ರೂಪಾ, ಸೌಮ್ಯಾ, ಗಜೇಂದ್ರ, ಪ್ರವೀಣ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net