ಶಿಕಾರಿಪುರ ಕೆರೆಯಲ್ಲಿ ಬೋಟಿಂಗ್‌ಗೆ ಚಾಲನೆ

11 skp 4
ಶಿಕಾರಿಪುರದ ಶ್ರೀ ಹುಚ್ಚರಾಯನ ಕೆರೆಯಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಬೋಟಿಂಗ್ ನಡೆಸಿದರು. ವೀರನಗೌಡ, ಶಶಿಧರ್ ಚುರ್ಚಿಗುಂಡಿ, ವಿಠಲ್ ಇತರರಿದ್ದರು.
Published on

ಶಿಕಾರಿಪುರ: ಶ್ರೀ ಹುಚ್ಚರಾಯಸ್ವಾಮಿ ಜಾತ್ರೋತ್ಸವ ಪ್ರಯುಕ್ತ ಶ್ರೀ ಹುಚ್ಚರಾಯನ ಕೆರೆಯಲ್ಲಿ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಬೋಟಿಂಗ್‌ಗೆ ಚಾಲನೆ ನೀಡಿ, ಬೋಟಿಂಗ್ ಮಾಡಿದರು.

ಶ್ರೀ ಹುಚ್ಚರಾಯನ ಕೆರೆಯಲ್ಲಿ ಬೋಟಿಂಗ್ ಮತ್ತು ಸಮೀಪದ ಭ್ರಾಂತೇಶ ಉದ್ಯಾನದಲ್ಲಿ ಕಾರಂಜಿ ಇರುವ ಕಾರಣ ಪ್ರವಾಸಿಗರು ಹೆಚ್ಚಾಗಿ ಆಗಮಿಸುತ್ತಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ಶ್ರೀ ಹುಚ್ಚರಾಯನ ಕೆರೆ, ಭ್ರಾಂತೇಶ ಉದ್ಯಾನ, ಶಿವನಮೂರ್ತಿ ಮತ್ತು ವಿದ್ಯುತ್ ಕಾರಂಜಿ ನಿರ್ಮಿಸಲು ಅನುದಾನ ನೀಡಿದ್ದರು. ದರ್ಶನಕ್ಕೆ ಬರುವ ಭಕ್ತರಿಗೆ ಉತ್ತಮ ವಾತಾವರಣವಿದೆ ಎಂದು ಬಿ.ವೈ.ರಾಘವೇಂದ್ರ ತಿಳಿಸಿದರು.

ತಾಲೂಕಿನ ಅಂಜನಾಪುರ ಜಲಾಶಯದ ಸಮೀಪದಲ್ಲಿ ರಾಕ್ ಗಾರ್ಡನ್ ನಿರ್ಮಿಸಲಾಗಿದೆ. ಈಸೂರಿನ ಸ್ವಾತಂತ್ರೃ ಸಂಗ್ರಾಮದಲ್ಲಿ ಮುಂಚೂಣಿಯಲ್ಲಿರುವ ಐವರನ್ನು ಗಲ್ಲಿಗೇರಿಸುವ ಚಿತ್ರಣ ಸೇರಿ ಪ್ರಮುಖ ಘಟನೆಗಳ ಮೂರ್ತಿಗಳಿವೆ. ಸಮೀಪದ ಅಕ್ಕಮಹಾದೇವಿಯ ಜನ್ಮಸ್ಥಳ ಉಡುಗಣಿಯನ್ನು 69 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವೀರನಗೌಡ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಶಶಿಧರ್ ಚುರ್ಚಿಗುಂಡಿ, ವಿಠಲ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net