ಸಹಕಾರ ಸಂಘದ ಪ್ರಗತಿಗೆ ರೈತರೇ ಶಕ್ತಿ

9-ANP-P1
ಆನಂದಪುರ ಸಮೀಪದ ಆಚಾಪುರ ಪಿಎಸಿಎಸ್ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವವನ್ನು ಮಾಜಿ ಸಚಿವ ಹರತಾಳು ಹಾಲಪ್ಪ ಉದ್ಘಾಟಿಸಿದರು. ಆನಂದಪುರ ಮುರಘಾ ಮಠದ ಶ್ರೀ, ಕೆ.ಆರ್.ರಾಜು, ಮಂಜಪ್ಪ ಇತರರಿದ್ದರು.
Published on

ಆನಂದಪುರ: ಸಹಕಾರ ತತ್ವವು ಪುರಾತನ ಕಾಲದಿಂದ ಬಂದಿದೆ. ಸಂಘಗಳ ಪ್ರಗತಿಗೆ ರೈತರೇ ಶಕ್ತಿ ಎಂದು ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಸಮೀಪದ ಆಚಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ರಜತ ಮಹೋತ್ಸವ, ನೂತನ ಸಹಕಾರ ಭವನ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಇಬ್ಬರು ಕೈಜೋಡಿಸಿರುವ ಚಿತ್ರ ಸಹಕಾರ ಸಂಘದ ಚಿಹ್ನೆ. ಎಲ್ಲರೂ ಒಂದಾಗಿ ಬದುಕಬೇಕೆಂಬುದು ಸಹಕಾರ ತತ್ವದ ಮೂಲಾಂಶ ಎಂದು ತಿಳಿಸಿದರು.

ಹಣ ಸದಾ ಚಲಾವಣೆಯಲ್ಲಿ ಇರಬೇಕು. ಮಣಿಪಾಲದ ಟಿಎಂಎ ಪೈ ಜನರ ಹಣದ ಅವಶ್ಯಕತೆಗಳನ್ನು ಗಮನಿಸಿ ಹಣಕಾಸು ಸಂಸ್ಥೆ ಆರಂಭಿಸಿದರು. ಸಿದ್ದನ ಗೌಡ ಸಣ್ಣ ರಾಮನ ಗೌಡ ಪಾಟೀಲ್ ಸಹಕಾರ ಸಂಘದ ಸಂಸ್ಥಾಪಕರು. ಇವರ ನೆನಪಿಗೆ ಎಲ್ಲ ಸಹಕಾರ ಸಂಘಗಳಲ್ಲಿ ಫೋಟೋ ಹಾಕಿರುತ್ತಾರೆ ಎಂದರು.

ಮಾಜಿ ಸಚಿವ ಹರತಾಳು ಹಾಲಪ್ಪ ಮಾತನಾಡಿ, ನನ್ನ ಅವಧಿಯಲ್ಲಿ ಸಹಕಾರ ಸಂಘ, ದೇವಸ್ಥಾನ, ಸಮುದಾಯ ಭವನ, ಎಲ್ಲ ಜಾತಿ ಸಂಘಟನೆಗಳಿಗೂ ಸರ್ಕಾರದಿಂದ ಹಣ ಕೊಡಿಸಿದ್ದೇನೆ. ರೈತರ ಸಂಕಷ್ಟ ಕಾಲದಲ್ಲಿ ಯಡಿಯೂರಪ್ಪ ಅವರು ಮೊದಲ ಅವಧಿಯಲ್ಲಿ ಶೇ. 3ರಂತೆ ಬಡ್ಡಿ ವಿಧಿಸಿ ಸಹಕಾರ ಸಂಘಗಳು ಸಾಲ ನೀಡುವಂತೆ ಆದೇಶಿಸಿದರು. 2ನೇ ಅವಧಿಯಲ್ಲಿ ಬಡ್ಡಿ ರಹಿತ ಸಾಲ ನೀಡುವಂತೆ ಆದೇಶಿಸಿ ರೈತರಿಗೆ ನೆರವಾಗಿದ್ದರು ಎಂದು ಹೇಳಿದರು.

ನಿರ್ದೇಶಕರಿಗೆ ಸನ್ಮಾನ: ಆಚಾಪುರ ಪಿಸಿಎಸ್ ಸಂಸ್ಥಾಪಕ ಅಧ್ಯಕ್ಷ ನಜರುಲ್ಲಾ ಖಾನ್, ಮಾಜಿ ನಿರ್ದೇಶಕ ಪಿ.ಪ್ರಕಾಶ್, ಎ.ಎಚ್.ಅಬ್ದುಲ್ ಖಾದರ್, ಯೋಮಕೇಶ, ದುರ್ಗಪ್ಪ, ಯಶೋದಮ್ಮ, ಅಬ್ದುಲ್ ವಾಹಿದ್, ಸುಶೀಲಮ್ಮ, ಈಶ್ವರಪ್ಪ, ಶಾಂತಪ್ಪ, ಲಲಿತಮ್ಮ, ಕೆ.ಎಲ್.ಗಿರೀಶ್, ಮಮತಾ ಅವರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷ ಕೆ.ಆರ್.ರಾಜು ಸಂಘ ನಡೆದು ಬಂದ ದಾರಿ ಹಾಗೂ ಮುನ್ನೋಟದ ಬಗ್ಗೆ ಮಾಹಿತಿ ನೀಡಿದರು. ಉಪಾಧ್ಯಕ್ಷ ಮಂಜಪ್ಪ ಜಂಬಳ್ಳಿ, ನಿರ್ದೇಶಕರಾದ ಎಲ್.ಲಕ್ಷ್ಮಣಪ್ಪ, ಮಹಮದ್ ಹುಸೇನ್, ಮಂಜಪ್ಪ, ಗೌರಮ್ಮ, ಎಸ್.ಆರ್.ಪ್ರವೀಣ್‌ಕುಮಾರ್, ಟಾಕಪ್ಪ ಡಿ. ಗೇರುಬೀಸು, ಬಿ.ಎಚ್.ಗಂಗಾಧರಪ್ಪ, ಪದ್ಮಾವತಿ, ಆಚಾಪುರ ಗ್ರಾಪಂ ಅಧ್ಯಕ್ಷ ಕಲೀಮುಲ್ಲಾ ಖಾನ್, ಉಪಾಧ್ಯಕ್ಷೆ ಎಸ್.ಜಿ.ನಾಗರತ್ನಾ, ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಎಸ್.ಲೋಕೇಶಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net