ಶಿವಮೊಗ್ಗದಲ್ಲಿ ಭಾರಿ ಸ್ಫೋಟ, ಕಾರ್ಮಿಕರ ಮೃತದೇಹ ಛಿದ್ರಛಿದ್ರ: ತುಂಗಾ-ಭದ್ರಾ ಡ್ಯಾಂಗೂ ಆಪತ್ತು?

Blast
Blast
Published on

ಶಿವಮೊಗ್ಗ: ಇಲ್ಲಿನ ಹೊರವಲಯದ ಹುಣಸೋಡು ಗ್ರಾಮದ ಬಳಿ ಕ್ವಾರಿಯಲ್ಲಿ ಗುರುವಾರ ರಾತ್ರಿ ಭಾರಿ ಪ್ರಮಾಣದ ಜಿಲೆಟಿನ್​ ಸ್ಫೋಟಗೊಂಡಿದ್ದು, ಸುತ್ತಲಮುತ್ತರ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಘಟನೆಯಲ್ಲಿ ಬಿಹಾರ ಮೂಲದ 8 ಕಾರ್ವಿುಕರು ಸಹೀವ ದಹನವಾಗಿದ್ದಾರೆ. ಮೃತದೇಹಗಳು ಛಿದ್ರಛಿದ್ರವಾಗಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ನಿನ್ನೆ ರಾತ್ರಿ ಆದ ಸ್ಫೋಟದ ರಭಸಕ್ಕೆ ಶಿವಮೊಗ್ಗ ನಗರದಲ್ಲಿ ಬಹುತೇಕ ಮನೆಗಳು ಅದುರಿವೆ, ಭೂಮಿ ಕಂಪಿಸಿದೆ. ಅಷ್ಟೇ ಅಲ್ಲ, ಭಾರಿ ಸ್ಫೋಟದಿಂದಾಗಿ ತುಂಗಾ ಮತ್ತು ಭದ್ರಾ ಜಲಾಶಯಕ್ಕೂ ಆಪತ್ತು ಕಾದಿದೆಯಾ? ಎಂಬ ಆತಂಕ ಎದುರಾಗಿದೆ. ಇದನ್ನೂ ಓದಿರಿ ಪ್ಲೀಸ್​… ನನ್ನ ಮಗಳನ್ನು ಕಾಪಾಡಿ ಎಂದು ಗೋಗರೆಯುತ್ತಿದ್ದ ತಂದೆ ಕಣ್ಣೆದುರಲ್ಲೇ ಪ್ರಾಣಬಿಟ್ಟ ಕಂದಮ್ಮ! ವಿಮಾನದಲ್ಲಿ ನಡೆದದ್ದಾದರೂ ಏನು?

ಶಿವಮೊಗ್ಗ ಸಮೀಪವೇ ತುಂಗಾ ಮತ್ತು ಭದ್ರಾ ಜಲಾಶಯ ಇದೆ. ಈ ಸ್ಫೋಟದಿಂದಾಗಿ ಜಲಾಶಯಗಳಿಗೂ ಗಂಡಾಂತರ ಎದುರಾಗಿದೆಯಾ? ಎಂಬ ಆತಂಕದ ಹಿನ್ನೆಲೆಯಲ್ಲಿ ಇಂದು(ಶುಕ್ರವಾರ) ಬೆಳ್ಳಂಬೆಳಗ್ಗೆ ಭದ್ರಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರು ಭದ್ರಾ ಜಲಾಶಯಕ್ಕೆ‌ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹುಣಸೋಡು ಗ್ರಾಮದ ಬಳಿ ಸಂಭವಿಸಿದ ಸ್ಫೋಟಕ್ಕೆ ಕಾರಣ ಏನೆಂಬುದು ಗೊತ್ತಾಗಿಲ್ಲ. ಸ್ಫೋಟಕ ತುಂಬಿದ್ದ ಲಾರಿಯೇ ಸ್ಫೋಟಗೊಂಡಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net