More

    ಪ್ಲೀಸ್​… ನನ್ನ ಮಗಳನ್ನು ಕಾಪಾಡಿ ಎಂದು ಗೋಗರೆಯುತ್ತಿದ್ದ ತಂದೆ ಕಣ್ಣೆದುರಲ್ಲೇ ಪ್ರಾಣಬಿಟ್ಟ ಕಂದಮ್ಮ! ವಿಮಾನದಲ್ಲಿ ನಡೆದದ್ದಾದರೂ ಏನು?

    ನಾಗಪುರ: 7 ವರ್ಷದ ಮಗಳೊಂದಿಗೆ ಲಖನೌನಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ತಂದೆ ಬದುಕಲ್ಲಿ ದುರಂತ ಘಟನೆಯೊಂದು ಸಂಭವಿಸಿದೆ. ತನ್ನ ಮಗಳನ್ನು ಬದುಕಿಸಿಕೊಳ್ಳಲೇಬೇಕೆಂದು ಪಣತೊಟ್ಟು ಹೊರಟ್ಟಿದ್ದ ತಂದೆಯ ಕಣ್ಣೆದುರಲ್ಲೇ ಆ ಮಗಳು ಪ್ರಾಣಬಿಟ್ಟ ಹೃದಯವಿದ್ರಾವಕ ಘಟನೆಯೊಂದು ಮಂಗಳವಾರ ಬೆಳಗ್ಗೆ ನಾಗಪುರದಿಂದ ವರದಿಯಾಗಿದೆ.

    ಉತ್ತರಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಸೆಹೆರಿಖಾತ್​ನ ಚಫ್ಫಾ ನಿವಾಸಿ ಆಯುಷಿ ಪುನ್ವಾಸಿ ಪ್ರಜಾಪತಿ ಎಂಬ 7 ವರ್ಷದ ಬಾಲಕಿ ತನ್ನ ತಂದೆಯೊಂದಿಗೆ ಲಖನೌನಿಂದ ಮುಂಬೈಗೆ ಹೊರಟ ಗೋಏರ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಳು. ಇದನ್ನೂ ಓದಿರಿ ಹಿರಿಮಗನನ್ನು ಕೊಲ್ಲಲು ಕಿರಿಮಗನಿಗೆ ಸುಪಾರಿ ಕೊಟ್ಟ ಪಾಪಿ ತಂದೆ!ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ

    ವಿಮಾನ ಮೇಲೆ ಹಾರುತ್ತಿದ್ದಂತೆಯೇ ಆಕೆ ಉಸಿರಾಡಲು ತೊಂದರೆ ಪಡಲಾರಂಭಿಸಿದಳು. ಮಗಳ ರಕ್ಷಣೆಗಾಗಿ ತಂದೆಯ ಜೀವ ವಿಲವಿಲ ಒದ್ದಾಡುತ್ತಿತ್ತು. ನನ್ನ ಮಗಳನ್ನು ಕಾಪಾಡಿ ಎನ್ನುತ್ತಿದ್ದರು. ಪ್ರಜ್ಞೆ ಕಳೆದುಕೊಂಡ ಬಾಲಕಿಯ ವೈದ್ಯಕೀಯ ಆರೈಕೆಗಾಗಿ ತಕ್ಷಣ ವಿಮಾನವನ್ನು ನಾಗಪುರದಲ್ಲಿ ಇಳಿಸಲಾಯಿತು. ದೇಹವು ತಣ್ಣಗಾಗಿ ಗಂಭೀರ ಅವಸ್ಥೆಯಲ್ಲಿದ್ದ ಬಾಲಕಿಯನ್ನು ಕಿಂಗ್ಸ್​ವೇ ಆಸ್ಪತ್ರೆಯ ನಿಗಾದಲ್ಲಿ ನಾಗಪುರದ ಸರ್ಕಾರಿ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು.

    ರಕ್ತಹೀನತೆಯಿಂದ ಬಳಲುತ್ತಿದ್ದಳೆನ್ನಲಾದ ಬಾಲಕಿಯ ಸಾವಿಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಹೆಚ್ಚಿನ ಎತ್ತರದಿಂದಾಗಿ ಟ್ರಿಗರ್ ಆಗಿರುವ ಹೃದಯಾಘಾತವಾಗಿದೆ. ನೈಸರ್ಗಿಕ ಸಾವಾಗಿದ್ದರೂ ಹೆಚ್ಚಿನ ಪರೀಕ್ಷೆಗಾಗಿ ಬಾಲಕಿಯ ವಿಸೇರಾ ಸ್ಯಾಂಪಲ್ಅನ್ನು ಉಳಿಸಿಕೊಳ್ಳಲಾಗಿದೆ ಎಂದು ಸರ್ಕಾರಿ ವೈದ್ಯರು ಹೇಳಿದ್ದಾರೆ. ಇದನ್ನೂ ಓದಿರಿ ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

    ಬಾಲಕಿಯ ತಂದೆ ವಿಮಾನ ನಿಲ್ದಾಣದ ಅಧಿಕಾರಿಗಳಿಗಾಗಲಿ, ವೈದ್ಯರಿಗಾಗಲಿ ಯಾವುದೇ ವೈದ್ಯಕೀಯ ಇತಿಹಾಸದ ಬಗ್ಗೆ ತಿಳಿಸಿಲ್ಲ. ಆದರೆ ಅವರ ಬ್ಯಾಗ್ ಪರಿಶೀಲಿಸಿದಾಗ ಬಾಲಕಿಯ ರಕ್ತ ಪರೀಕ್ಷೆಯ ವರದಿಗಳು ಸಿಕ್ಕಿವೆ. “ಹಿಮೋಗ್ಲಾಬಿನ್ ಮಟ್ಟವು 8 ರಿಂದ 10 ಗ್ರಾಂಗಿಂತ ಕಡಿಮೆ ಇದ್ದರೇ ವಿಮಾನ ಪ್ರಯಾಣಕ್ಕೆ ಅನುಮತಿ ನೀಡುವುದಿಲ್ಲ. ಇನ್ನು ಬಾಲಕಿಯ ವರದಿಯಲ್ಲಿ 2.5 ಗ್ರಾಂ ಹಿಮೊಗ್ಲೊಬಿನ್ ಮಟ್ಟ ಇತ್ತು. ಇದು ತೀವ್ರ ರಕ್ತಹೀನತೆಯ ಸ್ಥಿತಿ. ಚಿಕಿತ್ಸೆಗಾಗಿ ಮುಂಬೈಗೆ ಹೊರಟಿದ್ದಾರೆ. ಆದರೆ ಬಾಲಕಿಯ ತಂದೆ ಈ ಬಗ್ಗೆ ಮಾಹಿತಿ ನೀಡಿಲ್ಲ” ಎಂದಿದ್ದಾರೆ ವಿಮಾನ ಅಧಿಕಾರಿಗಳು.

    ಬಾಲಕಿಗೆ ಆರೋಗ್ಯದ ಸಮಸ್ಯೆ ಇದ್ದಿರಬೇಕು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಅದನ್ನು ತಿಳಿಯಲು ಸಾಧ್ಯವಿಲ್ಲ. ಕುಟುಂಬದವರು ವೈದ್ಯಕೀಯ ಇತಿಹಾಸವನ್ನು ಒದಗಿಸಿದರೆ ನಿರ್ದಿಷ್ಟ ಕಾರಣ ತಿಳಿಯಬಹುದೆಂಬುದು ಸರ್ಕಾರಿ ಆಸ್ಪತ್ರೆಯ ವೈದ್ಯರ ಅನಿಸಿಕೆ. ಮಂಗಳವಾರ ಸಂಜೆ ಬಾಲಕಿಯ ಶವವನ್ನು ತಂದೆಗೆ ನೀಡಲಾಗಿದ್ದು, ರಸ್ತೆಯ ಮೂಲಕ ಸ್ವಂತ ಸ್ಥಳಕ್ಕೆ ಕರೆದೊಯ್ಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಾಲಕಿಯನ್ನು ಚಿಕಿತ್ಸೆಗಾಗಿ ಮುಂಬೈಗೆ ಕರೆದುಕೊಂಡು ಹೋಗಲಾಗುತ್ತಿತ್ತು ಎನ್ನಲಾಗಿದೆ.

    ಧಾರವಾಡದಲ್ಲಿ ಭೀಕರ ಅಪಘಾತಕ್ಕೆ 13 ಜನ ಬಲಿ! ಆ ಕ್ಷಣ ಕುರಿತು ಗಾಯಾಳು ಬಿಚ್ಚಿಟ್ಟ ಎಕ್ಸ್​ಕ್ಲೂಸಿವ್​ ಮಾಹಿತಿ ಇಲ್ಲಿದೆ

    ಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?

    ಪ್ಲೀಸ್​ ಬಾಗಿಲು ತೆಗಿ.. ನಾವೆಲ್ಲ ಇದ್ದೇವೆ.. ಎಂದು ಗೋಗರೆಯುತ್ತಿದ್ದರೂ ನೋಡನೋಡುತ್ತಿದ್ದಂತೆ ನೇಣಿಗೆ ಶರಣಾದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts