ಶಿರೂರು ಕೆರೆಗೆ ಮೀನು ಮರಿ ಬಿಡುಗಡೆ

11kgl01
ಕಾರ್ಗಲ್ ಸಮೀಪದ ಶಿರೂರು ಕೆರೆಯಲ್ಲಿ ಮೀನುಗಾರಿಕೆ ಇಲಾಖೆಯಿಂದ ಬಿತ್ತನೆ ಮೀನು ಮರಿಗಳನ್ನು ಬಿಡಲಾಯಿತು. ಎಸ್.ಕೆ.ಸತೀಶ್, ಎಂ.ಎಚ್.ತಿಮ್ಮಪ್ಪ, ಎಂ.ರಾಜು, ಜಯಲಕ್ಷ್ಮೀ ಇತರರಿದ್ದರು.
Published on

ಕಾರ್ಗಲ್: ತಳಕಳಲೆ ಜಲಾಶಯ ಹಾಗೂ ಶಿರೂರು ಕೆರೆಗೆ ಮೀನುಗಾರಿಕೆ ಇಲಾಖೆಯಿಂದ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಬಲಿತ ಬಿತ್ತನೆ ಮೀನು ಮರಿಗಳನ್ನು ಬಿಡಲಾಯಿತು.

ತಳಕಳಲೆ ಜಲಾಶಯದ ಹಿನ್ನೀರಿಗೆ 10 ಲಕ್ಷ ಮೀನು ಹಾಗೂ ಜೋಗದ ಶಿರೂರು ಕೆರೆಗೆ 1.75 ಲಕ್ಷ ಮೀನು ಮರಿಗಳನ್ನು ಬಿಡಲಾಯಿತು. ಲಿಂಗನಮಕ್ಕಿ ಜಲಾಶಯದ ಮುಪ್ಪಾನೆ ಹಿನ್ನೀರಿನಲ್ಲೂ 2 ಲಕ್ಷ ಮೀನು ಮರಿಗಳನ್ನು ಬಿಡಲಾಯಿತು.

ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಎಸ್.ಕೆ.ಸತೀಶ್, ಸಹಾಯಕ ನಿರ್ದೇಶಕ ಎಂ.ಎಚ್.ತಿಮ್ಮಪ್ಪ, ಪಪಂ ಅಧ್ಯಕ್ಷ ಎಂ.ರಾಜು, ಉಪಾಧ್ಯಕ್ಷೆ ಜಯಲಕ್ಷ್ಮೀ, ಸದಸ್ಯರಾದ ಉಮೇಶ್ ಕೆಮ್ಮಣಗಾರು, ಪಿ.ಮಂಜುನಾಥ್, ಕೆ.ಸಿ.ಹರೀಶ್, ನಾಗರಾಜ್ ವಾಟೆಮಕ್ಕಿ, ಬಾಲಸುಬ್ರಹ್ಮಣ್ಯ, ಲಲಿತಾ ಮಂಜುನಾಥ್, ವಾಸಂತಿ ರಮೇಶ್, ತಾಲೂಕಿನ ಮೀನುಗಾರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net