ಅಂತರಘಟ್ಟಮ್ಮ ದೇವಿ ಅದ್ದೂರಿ ಜಾತ್ರೆ

07 HHR 02
ಹೊಳೆಹೊನ್ನೂರು ಪಟ್ಟಣದ ಶಕ್ತಿದೇವತೆ ಶ್ರೀ ಅಂತರಘಟ್ಟಮ್ಮ ದೇವಿ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಜರುಗಿತು.
Published on

ಹೊಳೆಹೊನ್ನೂರು: ಪಟ್ಟಣದ ಶಕ್ತಿ ದೇವತೆ ಶ್ರೀ ಅಂತರಘಟ್ಟಮ್ಮ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಅದ್ದೂರಿಯಾಗಿ ದಿಂಡು ಉತ್ಸವ ನಡೆಯಿತು.

ದಿಂಡು ಉತ್ಸವದ ಹಿನ್ನಲೆಯಲ್ಲಿ ಬೆಳಗ್ಗೆ ಶ್ರೀ ದೇವಿ ಶಿಲಾಮೂರ್ತಿಗೆ ಪುಣ್ಯತೀರ್ಥ, ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಪುಷ್ಪಾಲಂಕಾರ ನೈವೇದ್ಯ, ಮಹಾಮಂಗಳಾರತಿ ನಡೆಯಿತು. ಸಂಜೆ ಪುಷ್ಪಾಲಂಕೃತ ಉತ್ಸವ ಮೂರ್ತಿ ಹಾಗೂ ಕೆಂಚರಾಯ ಅವರನ್ನು ಹೊಳೆಗೆ ಕರೆತಂದು ಗಂಗೆಪೂಜೆ ಮಾಡಲಾಯಿತು.

ಬಳಿಕ ಸಿಡಿಮದ್ದು ಹಾಗೂ ವಾದ್ಯದೊಂದಿಗೆ ದೇವರನ್ನು ದೇವಸ್ಥಾನದ ಪ್ರಾಂಗಣಕ್ಕೆ ತರಲಾಯಿತು. ವ್ರತಾಧಾರಿಗಳು ಮಕ್ಕಳನ್ನು ದೇವಸ್ಥಾನಕ್ಕೆ ಮೂರು ಸುತ್ತು ದಿಂಡು ಉರುಳು ಸೇವೆ ಮಾಡಿಸಿದರು. ಅಮ್ಮನವರಿಗೆ ಹಣ್ಣು, ಕಾಯಿ ಪೂಜೆ ಮಾಡಿಸಿ ಭಕ್ತಿ ಸಮರ್ಪಿಸಿದರು. ದೇವಸ್ಥಾನ ಸೇವಾ ಸಮಿತಿ ಮುಖಂಡರು ಹಾಗೂ ನೂರಾರು ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net