ಸಕಲರಿಗೂ ಒಳಿತು ಬಯಸಿದ ತತ್ವಜ್ಞಾನಿ

30hos1p basava
ಹೊಸನಗರದ ತಾಲೂಕು ಸಭಾಂಗಣದಲ್ಲಿ ಬಸವ ಜಯಂತಿ ಆಚರಿಸಲಾಯಿತು. ರಶ್ಮಿ ಹಾಲೇಶ್, ಉಮೇಶ್ ಮಸರೂರು, ಎಚ್.ಆರ್.ತೀರ್ಥೇಶ್, ಎ.ವಿ.ಮಲ್ಲಿಕಾರ್ಜುನ್ ಇತರರಿದ್ದರು.
Published on

ಹೊಸನಗರ: ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಮೂಡಿಸಿದರು. ಲಿಂಗ, ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳನ್ನು ಬಸವಣ್ಣ ನಿರಾಕರಿಸಿದ್ದರು ಎಂದು ತಹಸೀಲ್ದಾರ್ ರಶ್ಮಿ ಹಾಲೇಶ್ ಹೇಳಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸಕಲ ಜೀವಾತ್ಮರಿಗೆ ಒಳಿತನ್ನು ಬಯಸಿದ ಕನ್ನಡದ ಒಬ್ಬ ತತ್ವಜ್ಞಾನಿ ವಿಶ್ವಗುರು ಬಸವಣ್ಣ ಎಂದು ತಿಳಿಸಿದರು.

ಅನುಭವ ಮಂಟಪದಲ್ಲಿ ಎಲ್ಲ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ, ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಿಶ್ವಕ್ಕೆ ಮಾದರಿಯಾಗಿದ್ದರು ಎಂದರು.

ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಉಮೇಶ್ ಮಸರೂರು, ಪ್ರಮುಖರಾದ ಎಚ್.ಆರ್.ತೀರ್ಥೇಶ್, ಎ.ವಿ.ಮಲ್ಲಿಕಾರ್ಜುನ್, ವೇದಂತಪ್ಪಗೌಡ ಕೋಡೂರು, ಕರುಣೇಶ್, ಸ್ವಾಮಿಗೌಡ, ಶೋಭರಾಜ್, ಶ್ರೀಮತಿ, ಸುಜಿತಾ, ವಸಂತಮ್ಮ, ವಾಣಿ, ಯಶೋದಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net