ಈ ದಿನದಂದು ತೆರೆಗೆ ಬರಲಿದೆ ಬಹುನಿರೀಕ್ಷಿತ 'ಶಿವಂ ಭಜೆ'

ವಿಜಯವಾಣಿ (7)
Published on

ತೆಲಂಗಾಣ: ಅಶ್ವಿನ್ ಬಾಬು ಮತ್ತು ದಿಗಂಗನಾ ಸೂರ್ಯವಂಶಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ "ಶಿವಂ ಭಜೆ" ಚಿತ್ರ ಇದೇ ಆಗಸ್ಟ್​ 01ರಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲು ಸಜ್ಜಾಗಿದೆ. ಸಸ್ಪೆನ್ಸ್, ಥ್ರಿಲ್ಲರ್ ಜಾನರ್​ ಒಳಗೊಂಡ ಈ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಇದೀಗ ನಿರ್ಮಾಪಕರಾದ ಮಹೇಶ್ವರ ರೆಡ್ಡಿ ಘೋಷಿಸಿದ್ದು, ಆಗಸ್ಟ್ 1 ರಂದು ವಿಶ್ವದಾದ್ಯಂತ ತೆರೆಕಾಣಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

2022ರಲ್ಲಿ ಬಿಡುಗಡೆಯಾಗಿದ್ದ 'ಗಂಧರ್ವ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅಪ್ಸರ್, ಇದೀಗ​ 'ಶಿವಂ ಭಜೆ' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಗಂಗಾ ಎಂಟರ್​ಟೈನ್​ಮೆಂಟ್ಸ್​ ಬ್ಯಾನರ್​ನಡಿ ತಯಾರಾಗಿರುವ ಚಿತ್ರಕ್ಕೆ ಮಹೇಶ್ವರ ರೆಡ್ಡಿ ಮೂಲಿ ಬಂಡವಾಳ ಹೂಡಿದ್ದಾರೆ.

ಚಿತ್ರದಲ್ಲಿ ಅರ್ಬಾಜ್ ಖಾನ್, ಹೈಪರ್ ಆದಿ, ಬ್ರಹ್ಮಾಜಿ ಮತ್ತು ಶಕಲಕ ಶಂಕರ್ ಸೇರಿದಂತೆ ಮುಂತಾದವರ ತಾರಾಗಣವಿದೆ. ಸಂಕಲನ ಚೋಟಾ ಕೆ. ಪ್ರಸಾದ್ ಮತ್ತು ಪ್ರೊಡಕ್ಷನ್​ ಡಿಸೈನ್​ ಸಾಹಿ ಸುರೇಶ್ ಮಾಡಿದ್ದಾರೆ. ಚಿತ್ರಕ್ಕೆ ದಾಶರಧಿ ಶಿವೇಂದ್ರ ಅವರ ಛಾಯಾಗ್ರಹಣವಿದ್ದು, ವಿಕಾಸ್ ಬಡಿಸ ಸಂಗೀತ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net