

ಪೇಶಾವರ: ಪಾಕಿಸ್ತಾನದ ಕೈಬರ್ ಪಖ್ತುಂಖ್ವಾ ಪ್ರದೇಶದಲ್ಲಿನ ಪುರಾತನ ಹಿಂದು ದೇವಾಲಯದ ಆವರಣದಲ್ಲಿ ಅಕ್ರಮವಾಗಿ ಕಾಮಗಾರಿ ನಡೆಸಲಾಗುತ್ತಿದ್ದು, ಇದನ್ನು ಸ್ಥಗಿತಗೊಳಿಸುವಂತೆ ಹಿಂದು ಸಮುದಾಯದ ಮುಖಂಡ ಹರೂನ್ ಸರಬ್ ದಿಯಾಲ್ ಅಲ್ಲಿನ ಆಡಳಿತವನ್ನು ಒತ್ತಾಯಿಸಿದ್ದಾರೆ.
ಪಾಕಿಸ್ತಾನದ ಐದು ಪ್ರಮುಖ ಐತಿಹಾಸಿಕ ಶಿವ ದೇವಾಲಯಗಳಲ್ಲಿ ಇದೂ ಒಂದಾಗಿದೆ. ದೇವಾಲಯ ಆವರಣದಲ್ಲಿ ಶೌಚಗೃಹ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ಬರುತ್ತದೆ. ತಕ್ಷಣ ಈ ಕಾಮಗಾರಿಯನ್ನು ನಿಲ್ಲಿಸುವಂತೆ ಅವರು ಆಗ್ರಹಿಸಿದ್ದಾರೆ. 19ನೇ ಶತಮಾನದಲ್ಲಿ ನಿರ್ವಣಗೊಂಡ ದೇವಾಲಯ ಇದಾಗಿದೆ.