ಶಿವಶರಣರಿಂದ ಸ್ತ್ರೀ ಸಮಾನತೆ ಪ್ರತಿಪಾದನೆ

sor (2)
ಸೊರಬದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಗಳ ಸಾಧಕರನ್ನು ಸನ್ಮಾನಿಸಲಾಯಿತು. ಶ್ರೀ ಮಹಾಂತ ಸ್ವಾಮೀಜಿ, ಮಧು ನಾಗರಾಜ್, ಶಂಕರ್ ಶೇಟ್, ಜಯಂತಿ, ಶಿಲ್ಪಾ ಅನೂಪ್ ಇತರರಿದ್ದರು.
Published on

ಸೊರಬ: ಬಸವಾದಿ ಶಿವಶರಣರು 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಸ್ಥಾನಮಾನ ನೀಡುವ ಮೂಲಕ ಸೀ ಸಮಾನತೆ ಪ್ರತಿಪಾದಿಸಿದ್ದರು ಎಂದು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ರಾಜಮನೆತನದ ಸಂಪತ್ತು ಮತ್ತು ರಾಜ್ಯವನ್ನು ಸಂರಕ್ಷಣೆ ಮಾಡಿ ಸೀ ಕುಲಕ್ಕೆ ನೈತಿಕ ಸ್ಥೈರ್ಯ ತುಂಬುವ ಕಾರ್ಯ ಮಾಡುವಲ್ಲಿ ಕೆಳದಿ ಚನ್ನಮ್ಮ, ಒನಕೆ ಓಬವ್ವ ಪ್ರಮುಖ ಪಾತ್ರ ವಹಿಸಿದ್ದರು. ಆಧ್ಯಾತ್ಮಿಕ ಆಲೋಚನೆ, ಸಂದೇಶ ಹರಡುವಲ್ಲಿ ಶರಣೆ ಅಕ್ಕಮಹಾದೇವಿ ವಹಿಸಿದ ಪಾತ್ರ ಆದರ್ಶವಾಗಬೇಕು ಎಂದರು.

ಸಮಾಜದಲ್ಲಿ ತಂದೆ, ತಾಯಿಯರನ್ನು ಗೌರವಿಸುವವರೇ ನಿಜವಾದ ಆದರ್ಶವಾದಿಗಳು. ಆದರೆ ಈ ಸಂಸ್ಕೃತಿ ಆಧುನಿಕ ಕಾಲಘಟ್ಟದಲ್ಲಿ ಮರೆಯಾಗುತ್ತಿದೆ. ಮಹಿಳೆಗೆ ಕುಟುಂಬ, ಧಾರ್ಮಿಕ ಆಚರಣೆಯಲ್ಲಿ ಉನ್ನತ ಸ್ಥಾನ ನೀಡುತ್ತಿರುವುದು ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿದಂತಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಟಿವಿ ನಿರೂಪಕಿ ಮಧು ನಾಗರಾಜ್, ಸಮಾಜದಲ್ಲಿ ಅಮ್ಮ ಎಂಬುದು ಸ್ನೇಹ, ಪ್ರೀತಿಯಿಂದ ಕೂಡಿದ ಒಂದು ದೈತ್ಯ ಶಕ್ತಿ. ಮಹಿಳೆ ಸದೃಢಳಾದರೆ ದೇಶದ ವ್ಯವಸ್ಥೆಯೂ ಬಲವಾಗುತ್ತದೆ. ಮಹಿಳೆಗೆ ರಾಜಕೀಯ, ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಸ್ಥಾನಮಾನ ನೀಡಿದರೆ ಮಾತ್ರ ದೇಶದ ಅಭಿವೃದ್ಧಿ ಸುಸ್ಥಿರವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ, ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಶಂಕರ್ ಶೇಟ್ ಮಾತನಾಡಿ, ಸದೃಢ ಸಮಾಜ ನಿರ್ಮಿಸುವಲ್ಲಿ, ದೇಶದ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಮಹಿಳೆಯರ ಪಾತ್ರ ಹಿರಿದು ಎಂದರು.

ವಿವಿಧ ಕ್ಷೇತ್ರಗಳ ಸಾಧಕರಾದ ರೂಪಾ ಶ್ರೀನಾಥ್, ಎ.ವಿ.ಪವಿತ್ರಾ, ಅನುಶ್ರೀ ರಾಯ್ಕರ್, ಪೂರ್ಣಿಮಾ ಭಾವೆ, ಸುಶ್ಮಿತಾ, ಮಮತಾ ರಾಜೇಶ್, ನೇತ್ರಾ ಬಾಸೂರು, ಹೇಮಲತಾ, ಪಲ್ಲವಿ, ಶಿಲ್ಪಾ, ಮೇಘಾಶ್ರೀ ಅವರನ್ನು ಸನ್ಮಾನಿಸಲಾಯಿತು.

ಅನುಶ್ರೀ ರಾಯ್ಕರ್ ನೃತ್ಯ ಪ್ರದರ್ಶನ ನಡೆಸಿಕೊಟ್ಟರು. ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವನಸುಮಾ ಕಲಾಬಳಗ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟಿತು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಜಯಂತಿ, ಶಿಲ್ಪಾ ಅನೂಪ್, ಆಶಾ ರಂಗನಾಥ್, ಸಂಪತ್‌ಕುಮಾರ್, ಪಾಲಾ ನಾಯ್ಕ, ವಿಜಯ್, ಶ್ರೀಧರ, ಉಮೇಶ್, ಲಕ್ಷ್ಮೀ ಮುರಳೀಧರ, ದಾನೇಶ್ವರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net