ರಾಯರ ದರ್ಶನ ಪಡೆದ ಶಿವರಾಜ್​ಕುಮಾರ್​ ದಂಪತಿ! ಮಂತ್ರಾಲಯದಲ್ಲಿ ವಿಶೇಷ ಪೂಜೆ.. Shiva Rajkumar visit mantralaya

shivanna
Published on
ರಾಯಚೂರು: ( Shiva Rajkumar visit mantralaya ) ಶಸ್ತ್ರಚಿಕಿತ್ಸೆ ಬಳಿಕ ನಟ ಶಿವರಾಜ್​​ಕುಮಾರ್​​ ಚೇತರಿಸಿಕೊಂಡಿದ್ದು,  ನಿನ್ನೆ ಮಂತ್ರಾಲಯಕ್ಕೆ ಭೇಟಿ ನೀಡಿ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದರು.

ವಿಶ್ರಾಂತಿಯಲ್ಲಿರುವ ಶಿವಣ್ಣ ಶೂಟಿಂಗ್​ನಿಂದ ಬಿಡುವು ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಮಂತ್ರಾಲಯಕ್ಕೆ ಭೇಟಿ ನೀಡಿದ್ದರು. ರಾಯರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಶಿವಣ್ಣ ಜೊತೆ ಪತ್ನಿ ಗೀತಾ ಶಿವರಾಜ್​ಕುಮಾರ್, ಪುತ್ರಿ ನಿವೇದಿತಾ ಕೂಡ ಇದ್ದರು. ಡಾ.ರಾಜ್ ಕುಟುಂಬ ಮೊದಲಿನಿಂದಲೂ ಗುರು ರಾಯರನ್ನು ಆರಾಧಿಸುತ್ತ ಬಂದಿದೆ.

shivanna

ಡಾ.ಶಿವರಾಜ್​ಕುಮಾರ್ ಅವರು ಇತ್ತೀಚಿಗೆ ಅಮೆರಿಕದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಗುಣಮುಖರಾಗಿ ತಾಯ್ನಾಡಿಗೆ ಅಗಮಿಸಿದ್ದರಿಂದ ಕುಟುಂಬ ಸಮೇತರಾಗಿ ಶ್ರೀಮಠದಲ್ಲಿ ವಿಶೇಷ ಪೂಜೆ ಸಲ್ಲಿಸಿ ರಾಯದ ದರ್ಶನ ಪಡೆದರು.

ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ನಟ ಶಿವರಾಜಕುಮಾರ ಅವರಿಗೆ ಆಶೀರ್ವದಿಸಿ ಶ್ರೀಮಠದಿಂದ ಗೌರವ ಸನ್ಮಾನ ಮಾಡಿದರು.

https://www.vijayavani.net/astronaut-don-pettit-share-a-video-on-the-iss-shows-how-he-puts-his-pants-on-in-zero-gravity

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net