

MP Milind Deora: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ಮತ ಕಳ್ಳತನ ಮತ್ತು ಚುನಾವಣಾ ಅಕ್ರಮಗಳ ಆರೋಪ ಮಾಡಿರುವ ಕಾಂಗ್ರೆಸ್ ವಿರುದ್ಧ ಶಿವಸೇನೆ ಸಂಸದ ಮಿಲಿಂದ್ ದಿಯೋರಾ ತೀವ್ರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಪಕ್ಷ ಮೊದಲು ತನ್ನ ಆಂತರಿಕ ಪ್ರಜಾಪ್ರಭುತ್ವದ ಕೊರತೆಯನ್ನು ಸರಿಪಡಿಸಿಕೊಳ್ಳಬೇಕು ಎಂದು ಸಲಹೆ ನಿಡಿದ್ದಾರೆ.
ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ದಿಯೋರಾ, ದೇಶದಲ್ಲಿನ ಚುನಾವಣಾ ವ್ಯವಸ್ಥೆಯ ಬಗ್ಗೆ ಪ್ರತಿಕ್ರಿಯಿಸುವ ಮುನ್ನ ಕಾಂಗ್ರೆಸ್ ತನ್ನ ಮನೆಯನ್ನು ಸರಿಪಡಿಸಿಕೊಳ್ಳಲಿ. ರಾಹುಲ್ ಗಾಂಧಿ ಮತ ಚೋರಿ ಆರೋಪಗಳನ್ನು ಶಿವಸೇನೆ ಸಂಸದ ತಳ್ಳಿಹಾಕಿದರು. 2014 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಇತಿಹಾಸದಲ್ಲಿಯೇ ಅತ್ಯಂತ ಕಡಿಮೆ ಸ್ಥಾನಗಳನ್ನು ಪಡೆದಿದೆ, ಈ ಹಿಂದೆ ದಶಕಗಳ ಕಾಲ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಹಾಗಾದರೆ, ಚುನಾವಣಾ ಆಯೋಗದೊಂದಿಗೆ ಕಾಂಗ್ರೆಸ್ ಕೈಜೋಡಿಸಿತ್ತು ಎನ್ನಲು ಸಾಧ್ಯವೆ..? ಈ ರೀತಿಯ ವಾದಗಳೆಲ್ಲಾ ಕೇವಲ ಹಾಸ್ಯಾಸ್ಪದವಾಗುತ್ತವೆ ಎಂದರು.
ಇದನ್ನೂ ಓದಿ:ಛಾಯಾಗ್ರಾಹಕರ ಸಂಘ ರಾಜ್ಯದಲ್ಲೇ ಮಾದರಿ
ಕಾಂಗ್ರೆಸ್ನ ನನ್ನ ಸ್ನೇಹಿತರು ಒಂದು ದಿನ ನೀವು ಮಾಧ್ಯಗಳನ್ನು ದೂಷಿಸುತ್ತಾರೆ, ಇನ್ನೊಂದು ದಿನ ನ್ಯಾಯಾಂಗವನ್ನು ದೂಷಿಸುತ್ತಾರೆ, ಮತ್ತೊಂದು ದಿನ ಸಾಮಾಜಿಕ ಜಾಲತಾಣಗಳನ್ನು ದೂಷಿಸುತ್ತಾರೆ, ಮಗದೊಂದು ದಿನ ಇವಿಎಂಗಳನ್ನು ದೂಷಿಸುತ್ತಾರೆ. ಈಗ ಇವಿಎಂಗಳನ್ನು ಬದಿಗಿಟ್ಟು ಮತದಾರರ ಪಟ್ಟಿಗೆ ಹೋಗಿದ್ದಾರೆ, ಇವೆಲ್ಲ ಕೇವಲ ನೆಪಗಳು, ಒಂದು ನಿರ್ದಿಷ್ಟ ಪಕ್ಷ ತನ್ನನ್ನು ತಾನು ಪ್ರಜಾಪ್ರಭುತ್ವಗೊಳಿಸಿಕೊಂಡ ದಿನ, ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸುವ ಬಗ್ಗೆ ಮಾತನಾಡಿದರೆ ನಾವೆಲ್ಲಾ ಕೇಳಬಹುದು ಎಂದು ಹೇಳಿದರು.
2024ರ ಜನವರಿ 14 ರಂದು ಕಾಂಗ್ರೆಸ್ ತೊರೆದ ದಿಯೋರಾ, ಪಕ್ಷದೊಂದಿಗೆ ತಮ್ಮ ಕುಟುಂಬದ 55 ವರ್ಷಗಳ ಸಂಬಂಧವನ್ನು ಕೊನೆಗೊಳಿಸಿದರು.(ಏಜೆನ್ಸಿಸ್)