ಯೋಗದಿಂದ ಸಕಾರಾತ್ಮಕ ಮನೋಭಾವ

yoga
Published on

ಶಿವಮೊಗ್ಗ: ಯೋಗ ಎಂದರೆ ಕೇವಲ ಆಸನಗಳನ್ನು ಮಾಡುವುದಲ್ಲ. ನಿಯಮಬದ್ಧವಾದ ಉಸಿರಾಟದ ಜತೆಯಲ್ಲಿ ಆಸನಗಳನ್ನು ಮಾಡಿದಾಗ ಪ್ರಯೋಜನ ಲಭಿಸುತ್ತದೆ. ಆರೋಗ್ಯಯುತ ಜೀವನಶೈಲಿ ನಮ್ಮದಾಗುತ್ತದೆ. ಸಕರಾತ್ಮಕ ಮನೋಭಾವ ಬೆಳೆಯುತ್ತದೆ ಎಂದು ಬೆಂಗಳೂರು ಗ್ಲೋಬಲ್ ಯೋಗ ಸಂಸ್ಥೆಯ ಯೋಗಗುರು ದೇವರಾಜ್ ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವದಿಂದ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಯೋಗ ಕುರಿತು ಉಪನ್ಯಾಸ ನೀಡಿದ ಅವರು, ಕಪಾಲಬಾತಿ ಮಾಡುವುದರಿಂದ ಮೆದುಳು, ಬಿಪಿ, ಮಧುಮೇಹ, ಅರ್ಥರೈಟಿಸ್ ಸೇರಿದಂತೆ ಮೂನ್ನೂರಕ್ಕೂ ಹೆಚ್ಚು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂದು ತಿಳಿಸಿದರು.

ರೋಟರಿ ಪಿಡಿಜಿ ರವಿ ಮಾತನಾಡಿ, ಸಾವಿರಾರು ವರ್ಷಗಳ ಪರಂಪರೆ ಇರುವ ಯೋಗ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಕ್ಕೆ ಪೂರಕವಾಗಿದೆ. ನಿಯಮಿತ ಆಹಾರ ಕ್ರಮ ಮತ್ತು ಯೋಗ ಅಭ್ಯಾಸಗಳಿಂದ ಆರೋಗ್ಯಯುತ ಜೀವನ ನಡೆಸಬಹುದು ಎಂದು ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷೆ ಸುಮತಿ ಜಿ.ಕುಮಾರಸ್ವಾಮಿ ಮಾತನಾಡಿ, ಯೋಗದ ಮಹತ್ವ ಅರಿತಿರುವ ಎಲ್ಲರೂ ಯೋಗ ಅಭ್ಯಾಸ ಮಾಡುತ್ತಿದ್ದಾರೆ. ವಿಶ್ವದ ನೂರಾರು ರಾಷ್ಟ್ರಗಳಲ್ಲಿ ಯೋಗ ಶಿಕ್ಷಣ ಆರಂಭವಾಗಿದೆ. ಭಾರತ ವಿಶ್ವಗುರು ಪಥದಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.

ರೋಟರಿ ವಲಯ 11ರ ಸಹಾಯಕ ಗೌರ‌್ನರ್ ಗುಡದಪ್ಪ ಕಸಬಿ, ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಕೆ.ಕುಮಾರಸ್ವಾಮಿ, ಚಂದ್ರಹಾಸ ರಾಯ್ಕರ್, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಮಧುರಾ ಮಹೇಶ್ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net