

ಶಿವಮೊಗ್ಗ: ನಮ್ಮ ಪೂರ್ವಜರು ಕಟ್ಟಿದ್ದ ದೇವಾಲಯ ಕೆಡವಿ ಆ ಭೂಮಿಯಲ್ಲಿ ನಿರ್ಮಿಸಿರುವ ಮಸೀದಿ ಜಾಗವನ್ನು ಹಿಂದುಗಳಿಗೆ ಹಸ್ತಾಂತರಿಸಬೇಕು. ಕಾಶಿ, ಮಥುರಾ ಮುಂತಾದ ಕಡೆಗಳಲ್ಲಿ ದೇಗುಲ ಜಾಗದಲ್ಲೇ ಮಸೀದಿ ನಿರ್ಮಾಣವಾಗಿದೆ. ಆ ಜಾಗವನ್ನು ನಮಗೆ ಮರಳಿಸದೇ ಇದ್ದರೆ ಕಾನೂನಾತ್ಮಕವಾಗಿ ಅದನ್ನು ಪಡೆಯುವುದು ನಮಗೆ ಗೊತ್ತಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಶೃಂಗಾರ ಗೌರಿ ಪೂಜೆ ಸಲ್ಲಿಸಲು ಅವಕಾಶ ಕೋರಿ ಮಹಿಳೆಯರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಂಡಿರುವುದು ಕಾನೂನು ಹೋರಾಟಕ್ಕೆ ಸಿಕ್ಕ ಗೆಲುವಾಗಿದೆ ಎಂದರು.
ಇತ್ತೀಚಿನ ವರ್ಷಗಳಲ್ಲಿ ನಿರ್ಮಾಣವಾಗಿರುವ ಮಸೀದಿಗಳಿಗೆ ನಮ್ಮ ಅಭ್ಯಂತರವಿಲ್ಲ. ಒಂದು ವೇಳೆ ಅದಕ್ಕೆ ತೊಂದರೆಯಾದರೆ ಇಡೀ ಹಿಂದು ಸಮಾಜ ಸ್ಪಂದಿಸುತ್ತದೆ. ನಮ್ಮ ದೇಗುಲದ ಜಾಗವನ್ನು ಮರಳಿಸುವ ಬಗ್ಗೆ ಮುಸ್ಲಿಂ ಮುಖಂಡರು ಗಂಭೀರವಾಗಿ ಚಿಂತನೆ ನಡೆಸಬೇಕೆಂದರು.