ಶಿವಮೊಗ್ಗದಲ್ಲಿ ಇಂಜಿನಿಯರ್ಸ್‌ ಡೇ

chamber
Published on

ಶಿವಮೊಗ್ಗ: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಸರ್ ಎಂ.ವಿಶ್ವೇಶ್ವರಯ್ಯ ಜನ್ಮದಿನದ ಅಂಗವಾಗಿ ಸೆ.15ರ ಬೆಳಗ್ಗೆ 10.30ಕ್ಕೆ ಇಂಜಿನಿಯರ್ಸ್‌ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಎನ್.ಗೋಪಿನಾಥ್ ತಿಳಿಸಿದರು.

ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಮೂರು ಕೈಗಾರಿಕೆಗಳ ಮಾಲೀಕರು, ಇಬ್ಬರು ಉತ್ತಮ ಕಾರ್ಮಿಕರನ್ನು ಸನ್ಮಾನಿಸಲಾಗುವುದು. ಇಂಜಿನಿಯರ್ಸ್‌ ಡೇ ನಿಮಿತ್ತ ಏರ್ಪಡಿಸಿದ್ದ ರಸಪ್ರಶ್ನೆ, ಭಾಷಣ, ಪ್ರಬಂಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸಂಘದ ಶಾಂತಲಾ ಸ್ಫೆರೋಕ್ಯಾಸ್ಟ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮವನ್ನು ಎಫ್‌ಕೆಸಿಸಿಐ ಅಧ್ಯಕ್ಷ ಕೆ.ಉಲ್ಲಾಸ್ ಕಾರಂತ್ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ವಿವರಿಸಿದರು.

ಕೈಗಾರಿಕಾ ಪ್ರಶಸ್ತಿ

ಆನಂದಪುರದ ಸಂತೋಷ್ ಎಂಟರ್‌ಪ್ರೈಸಸ್

ಮಾಚೇನಹಳ್ಳಿಯ ಸಹ್ಯಾದ್ರಿ ಪಾಲಿಮರ್ಸ್‌

ಶಿವಮೊಗ್ಗ ಆಟೋ ಕಾಂಪ್ಲೆಕ್ಸ್‌ನ ರಾಜಾ ಇಂಜಿನಿಯರಿಂಗ್ ವರ್ಕ್ಸ್

ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ

ಕಲ್ಲೂರು ಮಂಡ್ಲಿ ಜೆನ್ನಿ ರಿಟ್ರೇಡ್ಸ್‌ನ ಕೆ.ಗಂಗಾಧರ

ನಿದಿಗೆ ಮುರುಗೇಶ್ ಟೆಕ್ನಾಲಜೀಸ್‌ನ ಯು.ಮಹೇಂದ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net