ಜ್ಞಾನವಾಪಿ ಕೋರ್ಟ್ ಆದೇಶ ರಾಷ್ಟ್ರಭಕ್ತರ ಜಯ

kse 1
Published on

ಶಿವಮೊಗ್ಗ: ಕಾಶಿಯ ಜ್ಞಾನವಾಪಿ ಮಸೀದಿಯೊಳಗಿರುವ ಶೃಂಗಾರ ಗೌರಿಗೆ ಪ್ರತಿಮೆಗೆ ನಿತ್ಯ ಪೂಜೆ ಸಲ್ಲಿಸಲು ಅವಕಾಶ ಕೋರಿದ ಹಿಂದು ಧರ್ಮೀಯರ ಅರ್ಜಿಯನ್ನು ವಿಚಾರಣೆಗೆ ಅಲ್ಲಿನ ಕೋರ್ಟ್ ಮಾನ್ಯ ಮಾಡಿರುವುದು ಸಮಸ್ತ ಹಿಂದುಗಳಿಗೆ, ರಾಷ್ಟ್ರಭಕ್ತರಗೆ ಸಿಕ್ಕ ಜಯವಾಗಿದೆ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಬಣ್ಣಿಸಿದ್ದಾರೆ.

ಅಯೋಧ್ಯೆ ವಿರುದ್ಧದ ಹೋರಾಟದಲ್ಲೂ ಕಾನೂನು ಸಮರ ಶುರುವಾಗಿದ್ದು ಸಣ್ಣ ಹಂತದಲ್ಲಿಯೇ. ಅಯೋಧ್ಯೆಯಲ್ಲಿ ಈಗಾಗಲೇ ರಾಮಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಮುಂದಿನ ವರ್ಷಗಳಲ್ಲಿ ಗ್ಯಾನವ್ಯಾಪಿ ಮಸೀದಿಯಲ್ಲಿ ಸಿಕ್ಕಿರುವ ಈಶ್ವರ ಲಿಂಗಕ್ಕೂ ಪೂಜೆ ಸಲ್ಲಿಸುವ ಅಲ್ಲಿ ಮಂದಿರ ನಿರ್ಮಾಣ ಮಾಡುವ ಕಾರ್ಯಕ್ಕೆ ಕಾನೂನಿನ ಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಯೋಧ್ಯೆ, ಕಾಶಿ, ಮಥುರಾ, ಅಲ್ಲಿದ್ದ ರಾಮ, ಈಶ್ವರ ಹಾಗೂ ಕೃಷ್ಣ ಮಂದಿರಗಳು ಹಿಂದು ಧರ್ಮದವರ ಪಾಲಿಗೆ ಶ್ರದ್ಧಾ ಕೇಂದ್ರವಾಗಿತ್ತು. ಆದರೆ ಅಕ್ರಮಣಕಾರರು ಮಂದಿರಗಳನ್ನು ಕೆಡವಿ, ಮಸೀದಿ ನಿರ್ಮಾಣ ಮಾಡಿದ್ದರು. ಆ ಮಸೀದಿಗಳು ನಮಗೆ ಗುಲಾಮಗಿರಿಯ ಸಂಕೇತವಾಗಿದ್ದವು. ಒಂದೊಂದೇ ಮಸೀದಿಗಳು ತೆರವಾಗುವ ದಿನಗಳು ಬರಲಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net