ಸಂಭ್ರಮದ ತಿರಂಗಾ ಅಭಿಯಾನ ಡ್ರೋನ್‌ನಲ್ಲಿ ಸೆರೆ

drone
Published on

ಶಿವಮೊಗ್ಗ:ಜಿಲ್ಲೆಯ ವಿವಿಧೆಡೆ ಎರಡನೇ ದಿನವಾದ ಭಾನುವಾರವೂ ತಿರಂಗಾ ಸಂಭ್ರಮ ಮುಗಿಲು ಮುಟ್ಟಿತ್ತು. ತಿರಂಗಾದೊಂದಿಗೆ ಬೈಕ್ ರ‌್ಯಾಲಿ, ಪಥಸಂಚಲನ, ಮೆರವಣಿಗೆಗಳು ನಡೆದವು.

ಸೊರಬ ತಾಲೂಕಿನ ಜಡೆ ಗ್ರಾಪಂ ವ್ಯಾಪ್ತಿಯಲ್ಲಿ ಸ್ವಾತಂತ್ರೃದ ಅಮೃತ ಮಹೋತ್ಸವವನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಆ ದೃಶ್ಯವನ್ನು ಡ್ರೋನ್‌ನಲ್ಲಿ ಸೆರೆ ಹಿಡಿದಿದ್ದು, ಅದೀಗ ವೈರಲ್ ಆಗಿದೆ.

1,200 ವಿದ್ಯಾರ್ಥಿಗಳು ಭಾರತದ ಭೂಪಟದ ಮಾದರಿಯಲ್ಲಿ ಒಂದೆಡೆ ಸೇರಿ ರಾಷ್ಟ್ರ ಗೀತೆ ಹಾಡಿದರು. ಕೇಸರಿ, ಬಿಳಿ ವಸ್ತ್ರ ಹಾಗೂ ಹಸಿರು ಬಣ್ಣ ಟೋಪಿ ಧರಿಸಿ ವಿಶೇಷವಾಗಿ ಭಾರತ ಮಾತೆಗೆ ಗೌರವ ಸಲ್ಲಿಸಿದರು.

ಇನ್ನೊಂದೆಡೆ ಶಿವಮೊಗ್ಗದಲ್ಲಿ ಸಮನ್ವಯ ಟ್ರಸ್ಟ್‌ನಿಂದ ಏರ್ಪಡಿಸಿದ್ದ ಬೈಕ್ ರ‌್ಯಾಲಿಗೆ ಶಾಸಕ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು.

ಸ್ವಾತಂತ್ರೃಪೂರ್ವದಲ್ಲಿ ಯುವಕರು ಯೌವ್ವನಕ್ಕೆ ಬೆಂಕಿ ಕೊಟ್ಟು ಹೋರಾಟ ಮಾಡದೇ ಇದ್ದಿದ್ದರೆ ಸ್ವಾತಂತ್ರೃ ಸಿಗುತ್ತಿರಲಿಲ್ಲ. ಇಂದು ಸಮನ್ವಯ ಟ್ರಸ್ಟ್‌ನ ಯುವಕರು ಇಂದು ಅಮೃತ ಮಹೋತ್ಸವದ ಸಂದರ್ಭದಲ್ಲಿ ಬೈಕ್ ರ‌್ಯಾಲಿ ಮೂಲಕ ಸಂಭ್ರಮಿಸುತ್ತಿರುವುದು ಬೇರೆ ಯುವಕರಿಗೂ ಮಾದರಿಯಾಗಿದೆ ಎಂದರು.

ಸಮನ್ವಯ ಟ್ರಸ್ಟ್‌ನ ಕಾಶಿ, ಜಿಪಂ ಮಾಜಿ ಸದಸ್ಯ ಕೆ.ಇ.ಕಾಂತೇಶ್ ಉಪಸ್ಥಿತರಿದ್ದರು. ಬೈಕ್ ರ‌್ಯಾಲಿ ಮೂಲಕ ತಿರಂಗಾದೊಂದಿಗೆ ಸಮನ್ವಯ ಕಾರ್ಯಕರ್ತರು ನಗರದ ವಿವಿಧೆಡೆ ಸಂಚರಿಸಿ ದೇಶದ ಪರ, ಸ್ವಾತಂತ್ರೃ ಹೋರಾಟಗಾರರ ಪರ ಘೋಷಣೆಗಳನ್ನು ಕೂಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net