ಸಮಾಜಕ್ಕೆ ಮಾರಕವಾಗದಿರಲಿ ಪರಿವರ್ತನೆ

kateel
Published on

ಶಿವಮೊಗ್ಗ: ಪರಿವರ್ತನೆ ಎಂಬುದು ಅಭಿವೃದ್ಧಿಯ ವಾಹಕವಾಗಿದ್ದು ಅದು ಸಮಾಜಕ್ಕೆ ಕೊಡುಗೆಯಾಗಬೇಕೋ ವಿನಃ ಮಾರಕವಾಗಬಾರದು ಎಂದು  ಜೆಎನ್‌ಎನ್‌ಸಿಇ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ.ದಿವಾಕರ್ ಹೇಳಿದರು.

ಮಾನಸ ಟ್ರಸ್ಟ್‌ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಸಮಾರೋಪ ನುಡಿಗಳನ್ನಾಡಿದ ಅವರು, ವಿದ್ಯಾರ್ಥಿಗಳಿಗೆ ಪರಿವರ್ತನೆಯ ಪರಿವೀಕ್ಷಣೆ ಅಗತ್ಯವಿದೆ. ಈ ಪರಿವರ್ತನೆಗಾಗಿ ವಿದ್ಯಾರ್ಥಿಗಳು ಶಿಕ್ಷಣದ ಜತೆಜತೆಗೆ ಆತ್ಮವಿಶ್ವಾಸ, ಸಕಾರಾತ್ಮಕ ಧೋರಣೆ, ಕೌಶಲ್ಯಾವೃದ್ಧಿ, ಪರಿಶ್ರಮ ಬೆಳೆಸಿಕೊಳ್ಳಬೇಕಿದೆ ಎಂದರು.

ಶಿವಮೊಗ್ಗ ರಂಗಾಯಣ ಆಡಳಿತಾಧಿಕಾರಿ ಡಾ. ಎ.ಸಿ.ಶೈಲಜಾ ಮಾತನಾಡಿ, ವಿದ್ಯಾರ್ಥಿಗಳಿಗೆ ಆತ್ಮವಿಶ್ವಾಸ ಹಾಗೂ ದೃಢಸಂಕಲ್ಪ ಮುಖ್ಯ. ಶಿಕ್ಷಣವನ್ನು ಕಲಿಯಲು, ಸಂಭ್ರಮಿಸಲು ಪಠ್ಯೇತರ ಚಟುವಟಿಕೆಗಳು ಸಹಕಾರಿ ಎಂ ಅಭಿಪ್ರಾಯಪಟ್ಟರು.

ಕುವೆಂಪು ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ. ನಾಗರಾಜ ಪರಿಸರ ಮಾತನಾಡಿ, ಕೇವಲ ಐದು ವರ್ಷಗಳಲ್ಲಿ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಮಹತ್ತರ ಸಾಧನೆ ಮಾಡಿದೆ. ಕಾಲೇಜಿನ ವಿದ್ಯಾರ್ಥಿಯ ಪ್ರಗತಿಗೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಕಾಲೇಜು ನೀಡಿದೆ ಎಂದರು.

ಪ್ರಾಚಾರ್ಯೆ ಡಾ. ಕೆ.ಸಂಧ್ಯಾಕಾವೇರಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕಿ ಡಾ. ಸುಕೀರ್ತಿ ಅವರು ಬರೆದ ಸಾಮಾಜಿಕ ಜಾಲತಾಣಗಳು ಮತ್ತು ಯುವ ಜನತೆ ಪುಸ್ತಕ ಬಿಡುಗಡೆ ಮಾಡಲಾಯಿತು. ಮಾನಸ ಟ್ರಸ್ಟ್ ನಿರ್ದೇಶಕಿ ಡಾ. ರಜನಿ ಎ. ಪೈ, ಶೈಕ್ಷಣಿಕ ಸಲಹೆಗಾರ ಡಾ. ರಾಜೇಂದ್ರ ಚೆನ್ನಿ, ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಅರ್ಚನಾ ಭಟ್, ಮಂಜುನಾಥಸ್ವಾಮಿ, ಅಬ್ದುಲ್ ವಹಾಬ್, ಅಕ್ಷಯ್ ಪ್ರಭು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net