ಸಂತ್ರಸ್ತರಿಗೆ ನೆರವಾದ ಯುವ ಕಾಂಗ್ರೆಸ್

24 smg 12
Published on

ಶಿವಮೊಗ್ಗ: ತುಂಗಾ ನದಿಯ ಹರಿವು ಅತಿ ಹೆಚ್ಚಾಗಿದ್ದರಿಂದ ಕುಂಬಾರಗುಂಡಿ, ಬಿಬಿ ರಸ್ತೆ, ಬಟ್ಟೆ ಮಾರ್ಕೆಟ್ ಭಾಗದ ರಸ್ತೆಗಳು ಜಲಾವೃತಗೊಂಡಿದ್ದ ಮನೆಗಳಿಗೆ ಶುಕ್ರವಾರ ಸಂಜೆ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಕರ್ತರು ತೆರಳಿ ಮನೆಯಲ್ಲಿರುವ ವಸ್ತುಗಳನ್ನು ಸಾಗಿಸಲು ನೆರವಾದರು.

ಟಾಟಾ ಏಸ್ ಮತ್ತು ಟೆಂಪೋ ಗಾಡಿಗಳನ್ನು ವ್ಯವಸ್ಥೆ ಮಾಡಿ ಕಾರ್ಯಕರ್ತರೇ ಬೇರೆಡೆಗೆ ಸಾಗಿಸಿದರು. ಹಿರಿಯ ನಾಗರಿಕರು, ಮಕ್ಕಳನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಿದರು. ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಕೆ.ರಂಗನಾಥ್, ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಗಿರೀಶ್, ದಕ್ಷಿಣ ಬ್ಲಾಕ್ ಅಧ್ಯಕ್ಷ ಎಸ್.ಕುಮರೇಶ್, ಕಾರ್ಯಕರ್ತರಾದ ವಿನಯ್ ಐನಾಪುರ್, ಶಕ್ತಿ ಕುಮಾರ್, ಸುಹಾಸ್ ಗೌಡ, ವೆಂಕಟೇಶ್ ಕಲ್ಲೂರು, ಮಂಜುನಾಥ್ ಸಹಾಯಸ್ತ ಚಾಚಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net