ಶಿವಮೊಗ್ಗದಲ್ಲಿ ದಿಢೀರ್ ಕುಸಿದ ಆರು ಮನೆ, ತಪ್ಪಿದ ಅನಾಹುತ

31 smg 9
Published on

ಶಿವಮೊಗ್ಗ: ನಗರದ ಸವಾರ್‌ಲೈನ್ ರಸ್ತೆಯಲ್ಲಿ ಕಳೆದ ವಾರ ಸುರಿದಿದ್ದ ಸತತ ಮಳೆಯಿಂದ ಶನಿವಾರ ಬೆಳಗ್ಗೆ ಆರು ಮನೆಗಳು ದಿಢೀರ್ ಕುಸಿದಿದ್ದು ಮನೆಯಲ್ಲಿದ್ದವರು ತಕ್ಷಣ ಹೊರಗೆ ಬಂದಿದ್ದರಿಂದ ಭಾರಿ ಅನಾಹುತ ತಪ್ಪಿದೆ.

ಇಲ್ಲಿನ ಸವಾರ್‌ಲೈನ್ ರಸ್ತೆಯಲ್ಲಿ ಹೂ ಮಾರಾಟ ಮಾಡುವ ರಾಧಾ, ಭಾಗ್ಯಮ್ಮ, ಭಾಗ್ಯಲಕ್ಷ್ಮೀ, ನಾಗಮ್ಮ, ರಂಗಮ್ಮ ಮತ್ತು ಗಾಯತ್ರಮ್ಮ ಎಂಬುವರ ಮನೆಗಳ ಗೋಡೆಗಳು ಕುಸಿದಿವೆ. ಗೋಡೆಗಳು ಬೀಳುವ ಶಬ್ಧಕ್ಕೆ ಮನೆಯಲ್ಲಿದ್ದವರು ಹೊರಗೆ ಬಂದಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಮನೆಯಲ್ಲಿದ್ದ ವಸ್ತುಗಳು ಸಂಪೂರ್ಣ ಹಾನಿಗೀಡಾಗಿದ್ದು ಮನೆ ಕಳೆದುಕೊಂಡವರು ಬೀದಿಗೆ ಬೀಳುವಂತಾಗಿದೆ. ಮಳೆ ಹೊಡೆತಕ್ಕೆ ಮನೆಗಳು ಕುಸಿದು ಬಿದಿದ್ದು, ಘಟನಾ ಸ್ಥಳಕ್ಕೆ ಮೇಯರ್ ಸುನೀತಾ ಅಣ್ಣಪ್ಪ, ಉಪಮೇಯರ್ ಶಂಕರ್‌ಗನ್ನಿ, ಸ್ಥಳೀಯ ಪಾಲಿಕೆ ಸದಸ್ಯೆ ಮೀನಾ ಗೋವಿಂದರಾಜು, ಬಿಜೆಪಿ ಮುಖಂಡ ಎಸ್.ಜಿ.ಕಿರಣ್, ಅಧಿಕಾರಿಗಳು ಭೇಟಿ ನೀಡಿ ಮನೆ ಮಾಲೀಕರಿಗೆ ಸಾಂತ್ವಾನ ಹೇಳಿದರು. ಮನೆ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ನೀಡುವ ಭರವಸೆಯನ್ನೂ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net