ಪೊಲೀಸ್ ಠಾಣೆಗಳಲ್ಲಿ ನೊಂದವರ ಸಭೆ

23 smg 4
Published on

ಶಿವಮೊಗ್ಗ: ಪೊಲೀಸ್ ಠಾಣೆ, ಖಾಕಿ ಪಡೆ ಎಂದಾಕ್ಷಣ ಕೇಸು, ಲಾಠಿ, ಜೈಲು ಮಾತ್ರ ಜನರ ಕಲ್ಪನೆಗೆ ಬರುತ್ತದೆ. ಆದರೆ ಅದರಾಚೆಗೂ ಪೊಲೀಸರು ಕೂಡ ಕೆಲಸ ಮಾಡುತ್ತಾರೆ ಎಂಬುದಕ್ಕೆ ಭಾನುವಾರ ಜಿಲ್ಲೆಯ ಎಲ್ಲ ಠಾಣೆಗಳೂ ಮತ್ತೊಮ್ಮೆ ಸಾಕ್ಷಿಯಾದವು.

ವಿಶೇಷವಾಗಿ ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಆದೇಶದ ಮೇರೆಗೆ ಎಲ್ಲ ಪೊಲೀಸ್ ಠಾಣೆಗಳಲ್ಲೂ ನೊಂದವರ ಸಭೆ ನಡೆಸಲಾಯಿತು. ಹಿರಿಯ ಪೊಲೀಸ್ ಅಧಿಕಾರಿಗಳು ನೊಂದವರೊಂದಿಗೆ ಸಭೆ ನಡೆಸಿ ಕುಂದುಕೊರತೆಗಳನ್ನು ಆಲಿಸಿದರು.

ಇದೇ ವೇಳೆ ದೂರುದಾರರ ಪ್ರಕರಣಗಳ ತನಿಖಾ ಪ್ರಗತಿ ಕುರಿತು ಅಧಿಕಾರಿಗಳು ಮಾಹಿತಿ ನೀಡಿದರು. ದೂರುದಾರರು ತಮ್ಮ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿಕೊಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net