ಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್‌

11 smg 11
Published on

ಶಿವಮೊಗ್ಗ: ಶಿವಮೊಗ್ಗ-ಭದ್ರಾವತಿ ರಾಷ್ಟ್ರೀಯ ಹೆದ್ದಾರಿ ನಡುವೆ ಗುಂಡಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್‌ವೊಂದು ಡಿವೈಡರ್ ಮೇಲೆ ಹತ್ತಿದ್ದು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಕೊಯಮತ್ತೂರಿನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಬಸ್ ಹರಿಗೆ ಬಳಿ ಭಾರಿ ಗಾತ್ರದ ಗುಂಡಿಗೆ ಚಕ್ರಗಳು ಇಳಿದಿವೆ. ಮಳೆಯಿಂದ ಮೇಲೆ ಗುಂಡಿಯಲ್ಲಿ ನೀರು ನಿಂತಿದ್ದರಿಂದ ಆಳ ಅರಿಯದೇ ಚಾಲಕ ಇಳಿಸಿದ್ದು ನಿಯಂತ್ರಣ ಕಳೆದುಕೊಂಡ ಬಸ್‌ನ ಎರಡು ಚಕ್ರಗಳು ಕಿತ್ತು ಹೊರಬಂದಿವೆ.

ಬಸ್ ಡಿವೈಡರ್ ಮೇಲೆ ಹತ್ತಿದ್ದು ಅದೃಷ್ಟಕ್ಕೆ ಬಸ್‌ನಲ್ಲಿದ್ದ 30ಕ್ಕೂ ಅಧಿಕ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಬಂದ ಪೊಲೀಸರು ಎಲ್ಲರಿಗೂ ಚಿಕಿತ್ಸೆ ಕೊಡಿಸಿದ್ದಾರೆ. ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net