

ಶಿವಮೊಗ್ಗ: ಕಾಶಿ ಪೀಠದ ಜಗದ್ಗುರು ಶ್ರೀ ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಸಂಗೀತಯುಕ್ತ ಇಷ್ಟಲಿಂಗ ಪೂಜೆ ಸೋಮವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿತು. ವಿನೋಬಗರದ ಶ್ರೀ ಶಿವಾಲಯದ ಆವರಣದಲ್ಲಿ ಶ್ರೀ ವೀರಶೈವ ಸೇವಾ ಸಮಿತಿಯ 4ನೇ ವರ್ಷದ ಕಳಸಾರೋಹಣ ವಾರ್ಷಿಕೋತ್ಸವ ಪ್ರಯುಕ್ತ ಇಷ್ಟಲಿಂಗ ಮಹಾಪೂಜೆ ನಡೆಯಿತು.
ಬೆಳಗ್ಗೆಯಿಂದ ಭಕ್ತರು ಸರದಿಯಲ್ಲಿ ನಿಂತು ಇಷ್ಟಲಿಂಗ ಪೂಜೆಯಲ್ಲಿ ಪಾಲ್ಗೊಂಡು ಶ್ರೀಗಳ ಆರ್ಶೀವಾದ ಪಡೆದರು. ಲೋಕಸಭೆ ಸದಸ್ಯ ಬಿ.ವೈ.ರಾಘವೇಂದ್ರ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಕಾಶಿ ಶ್ರೀ ಜಗದ್ಗುರುಗಳ ಆರ್ಶೀವಾದ ಪಡೆದರು. ಮಹಾಪೂಜೆಯಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ದಾಸೋಹ ಏರ್ಪಡಿಸಲಾಗಿತ್ತು.
ವಿನೋಬನಗರ ಶ್ರೀ ವೀರಶೈವ ಸೇವಾ ಸಮಿತಿ ಅಧ್ಯಕ್ಷ ಎಚ್.ಮಲ್ಲಿಕಾರ್ಜುನ ಸ್ವಾಮಿ, ಕಾರ್ಯದರ್ಶಿ ಎಸ್.ಮುರುಗೇಶ್ ಕೂಸನೂರು, ಸಹ ಕಾರ್ಯದರ್ಶಿ ಮಹೇಶಮೂರ್ತಿ ಸಿ.ಹುಂಬಿ, ಪ್ರಧಾನ ಅರ್ಚಕ ಎಚ್.ಎಂ.ರುದ್ರಯ್ಯ ಶಾಸ್ತ್ರಿ, ಉಮೇಶ ಹಿರೇಮಠ, ಟಿ.ಎನ್.ಮಂಜಪ್ಪ, ಎ.ಎಂ.ಚಂದ್ರಯ್ಯ, ಕೆ.ವೀರೇಶ್, ಸಿ.ಆರ್.ನಂದಿಬಸಪ್ಪ, ಜಿ.ಎಸ್.ಮಲ್ಲಿಕಾರ್ಜುನ, ಎಚ್.ಕೆ.ಚಂದ್ರೇಗೌಡ, ಡಿ.ಆರ್.ಪುಟ್ಟಪ್ಪ, ಕೆ.ಕೊಟ್ರಪ್ಪ, ಎಸ್.ನಾಗರಾಜಯ್ಯ, ಎಂ.ಎನ್.ಪುನೀತ್, ಕೆ.ಸಂಪತ್‌ಕುಮಾರ್, ಎಚ್.ಎಂ.ವಿನಯಶಾಸ್ತ್ರಿ ಇತರರಿದ್ದರು.