ಅಕ್ರಮ ನಿರ್ಮಾಣ ಕೆಡವಲು ಮುಂದಾದ ಮಸೀದಿ ಸಮಿತಿ..!

shimla (1)
Published on

ಶಿಮ್ಲಾ: ಹಿಮಾಚಲ ಪ್ರದೇಶದ ಶಿಮ್ಲಾದ ಸಂಜೌಲಿ ಮಸೀದಿ ವಿವಾದ ಮತ್ತೊಂದು ತಿರುವು ಪಡೆದುಕೊಂಡಿದೆ. ಮಸೀದಿಯ ಅಕ್ರಮ ನಿರ್ಮಾಣವನ್ನು ಕೆಡವಲು ಮಸೀದಿ ಸಮಿತಿ ಗುರುವಾರ (ಸೆಪ್ಟೆಂಬರ್ 12) ಮುಂದಾಗಿದೆ.

ಸಮಿತಿ ಸದಸ್ಯರು ಶಿಮ್ಲಾ ಮುನ್ಸಿಪಲ್ ಕಾರ್ಪೊರೇಷನ್ ಕಮಿಷನರ್ ಭೂಪೇಂದ್ರ ಅತ್ರಿ ಅವರನ್ನು ಭೇಟಿಯಾಗಿ ಈ ಸಂಬಂಧ ಚರ್ಚೆ ನಡೆಸಿದ್ದು, ಅಕ್ರಮ ನಿರ್ಮಾಣ ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಸಂಜೌಲಿ ಪ್ರದೇಶದಲ್ಲಿ ಅಕ್ರಮವಾಗಿ ಮಸೀದಿ ನಿರ್ಮಾಣಕ್ಕೆ ಪ್ರತಿಯಾಗಿ ಶಿಮ್ಲಾ ವ್ಯಾಪಾರಿ ಮಂಡಲ್ ಗುರುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ಅರ್ಧ ದಿನದ ಮಾರುಕಟ್ಟೆ ಬಂದ್​ ನಡೆಸಿತು.

ಮಸೀದಿ ಅಕ್ರಮ ನಿರ್ಮಾಣದ ವಿರುದ್ಧ ಸೆಪ್ಟೆಂಬರ್ 11 ರಂದು ವಿವಿಧ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಪೊಲೀಸರು, ಲಾಠಿಪ್ರಹಾರ, ಜಲಫಿರಂಗಿ ಬಳಸಿ ಪ್ರತಿಭಟನಾಕಾರರನ್ನು ಚದುರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net