"ನಿನ್ನ ಜೊತೆ ನಾನಿದ್ದೇನೆ" - ಶಿಲ್ಪಾ ಶೆಟ್ಟಿಗೆ ಧೈರ್ಯ ತುಂಬಿದ ಸೋದರಿ

shil
Published on

ಮುಂಬೈ : ಅಶ್ಲೀಲ ವಿಡಿಯೋ ಚಿತ್ರೀಕರಣ ದಂಧೆಯ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ರಾಜ್​ ಕುಂದ್ರರ ಪತ್ನಿ, ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ನಿನ್ನೆಯಷ್ಟೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಳಲು ತೋಡಿಕೊಂಡಿದ್ದರು. 'ಕಾನೂನು ರೀತ್ಯ ಕ್ರಮ ಜರುಗಲಿ, ಮೀಡಿಯಾ ಟ್ರಯಲ್​ ಬೇಡ. ಅರ್ಧಂಬರ್ಧ ತಿಳಿದು ನಮ್ಮ ಮೇಲೆ ಕಾಮೆಂಟು ಮಾಡಬೇಡಿ' ಎಂದು ಕೇಳಿಕೊಂಡಿದ್ದ ಶಿಲ್ಪಾ, ಮಾಧ್ಯಮದಲ್ಲಿ ತಮ್ಮ ಬಗ್ಗೆ ಅನಗತ್ಯ ಆರೋಪಗಳು ಬರುತ್ತಿವೆ ಎಂದಿದ್ದರು.

ಶಿಲ್ಪಾರ ಈ ಇನ್ಸ್​ಟಾಗ್ರಾಂ ಪೋಸ್ಟ್​ಗೆ ಅವರ ಸೋದರಿ ಶಮಿತಾ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ. "ಲವ್​ ಯೂ ಮೈ ಮುನ್​ಕಿ" ಎಂದು ಅಕ್ಕನಿಗೆ ಹೇಳಿರುವ ಶಮಿತಾ, "ನಾನು ನಿನ್ನೊಂದಿಗಿದ್ದೇನೆ... ಕಷ್ಟದಲ್ಲಿ, ಸುಖದಲ್ಲಿ... ಯಾವಾಗಲೂ" ಎಂದು ಬರೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net