

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹೊಸ ಸಿನಿಮಾ ರಿಲೀಸ್ ಡೇಟ್ ಅನೌನ್ ಆಗಿದೆ. ಸುಖೀ ಅನ್ನುವ ಈ ಚಿತ್ರದಲ್ಲಿ ಎಲ್ಲವೂ ಇದೆ. ಈ ಬಗ್ಗೆ ಸ್ವತಃ ಶಿಲ್ಪಾ ಶೆಟ್ಟಿ ಒಂದು ಸ್ಪೆಷಲ್ ಟೀಸರ್ ಮೂಲಕ ಹೇಳಿಕೊಂಡಿದ್ದರು.
ಶಿಲ್ಪಾ ಶೆಟ್ಟಿ ಅಭಿನಯದ ಸಿನಿಮಾಗಳು ಮೊದಲಿನ ರೀತಿ ಈಗೇನೂ ಓಡ್ತಿಲ್ಲ. ಹೊಸ ರೀತಿಯ ಪ್ರಯತ್ನವನ್ನು ಶಿಲ್ಪಾ ಶೆಟ್ಟಿ ಬಿಟ್ಟಿಲ್ಲ ನೋಡಿ. ಆ ಸಾಲಿನ ಸದ್ಯದ ಸಿನಿಮಾ ಈ ಸುಖೀ ಅಂತಲೇ ಹೇಳಬಹುದು.
ಶಿಲ್ಪಾ ಶೆಟ್ಟಿ ಎಲ್ಲ ಮಹಿಳೆಯರ ಪ್ರತಿನಿಧಿಯಾಗಿಯೇ ಕಾಣಿಸಿಕೊಳ್ತಿದ್ದಾರೆ. ಹೆಣ್ಣುಮಕ್ಕಳಿಗೆ ಕಷ್ಟವೇ ಹೆಚ್ಚು ಸುಃಖ ಅನ್ನೋದು ಇಲ್ವೇ ಇಲ್ಲ ಅನ್ನೋದೇ ಈ ಒಟ್ಟು ಕಾನ್ಸೆಪ್ಟ್ ಅನಿಸುತ್ತಿದೆ. ಸ್ಪೆಷಲ್ ಟೀಸರ್ ನೋಡಿದ್ರೆ ಈಗ ಹಾಗೆ ಅನಿಸುತ್ತಿದೆ\
.
ʼಸುಖೀʼ ಚಿತ್ರದ ಪ್ರಚಾರದಲ್ಲಿ ಗುಲಾಬಿಯಾಗಿ ಬಣ್ಣದ ಸೀರೆಯನ್ನ ತೊಟ್ಟು ಕಂಗೊಳಿಸಿದ್ದಾರೆ. ಶಿಲ್ಪಾ ಶೆಟ್ಟಿ ಪಿಂಕ್ ಸೀರೆಯಲ್ಲಿ ಮ್ಯಾಚ್ ಮಾಡಿದ ಕಿವಿಯೋಲೆಗಳು ಮತ್ತು ನೆಕ್ಲೇಸ್ ಹಾಕಿಕೊಂಡಿದ್ದು, ಅವರ ಸೌಂದರ್ಯ ಎತ್ತಿ ತೋರಿಸುತ್ತದೆ.
ಸೀರೆಗೆ ಹೊಂದಾಣಿಕೆಯ ಕುಪ್ಪಸ ತೊಟ್ಟು ಅತ್ಯಾಧುನಿಕ ಸ್ಟೈಲನ್ನ ಶಿಲ್ಪ ಶೆಟ್ಟಿ ಸೀರೆಯಲ್ಲಿ ನೋಡಬಹುದು. ಸೋನಾಲ್ ಜೋಷಿ ನಿರ್ದೇಶನದ ʼಸುಖೀʼ ಚಲನಚಿತ್ರ 22 ಸೆಪ್ಟೆಂಬರ್, 2023 ರಂದು ಬಿಡುಗಡೆಯಾಗಲಿದೆ. ಸದ್ಯ ಸುಖಿ ಸಿನಿಮಾ ಪ್ರಚಾರಕ್ಕೆಂದು ಶಿಲ್ಪಾ ಪಿಂಕ್ ಸೀರೆಯಲ್ಲಿ ಕಂಗೊಳಿಸಿರೋದು ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ. ನೆಟ್ಟಿಗರು ಶಿಲ್ಪಾ ಶೆಟ್ಟಿಯನ್ನ ಪಿಂಕ್ ಬೇಬಿ ಅಂತಲೂ ಕರೆದಿದ್ದಾರೆ.