ಅಭಿವೃದ್ಧಿ ಪಥದಲ್ಲಿ ಶಿಕಾರಿಪುರ

16-ಎಸ್ಕೆಪಿ-4
ಶಿಕಾರಿಪುರದ ಆಪಿನಕಟ್ಟೆ ಸಮುದಾಯ ಭವನವನ್ನು ಶಾಸಕ ಬಿ.ವೈ.ವಿಜಯೇಂದ್ರ ಉದ್ಘಾಟಿಸಿದರು. ಕೆ.ಎಸ್.ಗುರುಮೂರ್ತಿ, ರುದ್ರೇಶ್, ಬೆಣ್ಣೆ ಪ್ರವೀಣ್, ವೀರನಗೌಡ ಇತರರಿದ್ದರು.
Published on

ಶಿಕಾರಿಪುರ: ಸಮುದಾಯದ ಆಚರಣೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು ಸಮುದಾಯ ಭವನಗಳು ಸಹಕಾರಿ ಎಂದು ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು.

ತಾಲೂಕಿನ ಆಪಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿ, ಶಿಕಾರಿಪುರ ತಾಲೂಕು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಮಾಜಿ ಸಿಎಂ ಬಿಎಸ್‌ವೈ ಅಧಿಕಾರದಲ್ಲಿ ಇದ್ದಾಗ ತಾಲೂಕಿನ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ನೀಡಿ ಮಾದರಿ ತಾಲೂಕು ಆಗುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದಾರೆ ಎಂದು ತಿಳಿಸಿದರು.

ಅಕಾಲಿಕ ಮಳೆಯಿಂದ ಕೆಲ ಗ್ರಾಮಗಳಲ್ಲಿ ನೀರು ನಿಂತು ಭತ್ತದ ಫಸಲು, ಮೆಕ್ಕೆಜೋಳ ಕಟಾವಿಗೆ ತೊಂದರೆಯಾಗಿದೆ. ಅಧಿಕಾರಿಗಳು ಬೆಳೆನಷ್ಟದ ಬಗ್ಗೆ ಸರ್ವೇ ಮಾಡಿ ಸಮರ್ಪಕ ಮಾಹಿತಿ ನೀಡುತ್ತಾರೆ. ಬೆಳೆನಷ್ಟಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದರು.

ಗುರುವಾರ ಭೂಮಿ ಹುಣ್ಣಿಮೆ ಇದ್ದು, ವರ್ಷಪೂರ್ತಿ ಹೊಲಗದ್ದೆಗಳ ಜತೆ ಬದುಕಿದ ರೈತ ಫಸಲು ತುಂಬಿದ ಇಳೆಗೆ ಸೀಮಂತ ಕಾರ್ಯ ಮಾಡಿ ಸಂಭ್ರಮಿಸುತ್ತಾನೆ. ಇದು ನಮ್ಮ ಮಣ್ಣಿನ ಸಂಸ್ಕೃತಿ, ಪರಂಪರೆ. ಹಿರಿಯರು ತೋರಿಸಿದ ಆಚಾರ ವಿಚಾರಗಳಿಂದ ವಿಮುಖರಾಗಬಾರದು ಎಂದು ತಿಳಿಸಿದರು.

ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ರುದ್ರೇಶ್, ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯದರ್ಶಿ ಬೆಣ್ಣೆ ಪ್ರವೀಣ್, ತಾಲೂಕು ಅಧ್ಯಕ್ಷ ವೀರನಗೌಡ, ಗ್ರಾಪಂ ಸದಸ್ಯರು, ಸ್ಥಳೀಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net