ಗೋಲ್ಡ್​ ಡಿಗ್ಗರ್​-ಲವ್​ ಜಿಹಾದ್​​​​ ಟೀಕೆಗಳನ್ನು ಅನುಭವಿಸಿದ್ದೇನೆ; ಟ್ರೋಲ್​​ ಕುರಿತು ಶಿಬಾನಿ ದಾಂಡೇಕರ್​ ಹೇಳಿದಿಷ್ಟು..

Untitled-design-2024-09-21T144003.424
Published on

ಮುಂಬೈ: ಬಿಟೌನ್​ನಲ್ಲಿ ಚಿರಪರಿಚಿತ ಹೆಸರು ಶಿಬಾನಿ ದಾಂಡೇಕರ್​. ಸಿನಿಮಾದಲ್ಲೀ ನಟಿಸುವುದಕ್ಕೂ ಮುನ್ನ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ಶಿಬಾನಿ ಮಾಡೆಲಿಂಗ್​ ಲೋಕದಲ್ಲಿ ಸಾಕಷ್ಟು ಹೆಸರು ಗಳಿಸಿದ್ದಾರೆ. ಶಿಬಾನಿ ಅವರು ಫರ್ಹಾನ್​ ಅಖ್ತರ್ ಅವರನ್ನು ಮದುವೆಯಾದ ಬಳಿಕ ಅವರ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್​ ಆಗಿವೆ. ಈ ಬಗ್ಗೆ ನಟಿ ಶಿಬಾನಿ ಅಂತರ್​​​ ಧರ್ಮೀಯ ಮದುವೆಯಾದ ಬಳಿಕ ತಾವು ಎದುರಿಸಿದ ಟ್ರೋಲಿಂಗ್​​ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಶಿಬಾನಿ, ನನ್ನ ಕೆಲಸದ ವೇಳೆ ಫರ್ಹಾನ್​ ಅಖ್ತರ್​ ಅವರನ್ನು ಭೇಟಿಯಾಗಿದ್ದಾಗಿ ತಿಳಿಸಿದ್ದಾರೆ. ನಮ್ಮ ಮಧ್ಯೆ ಅನೇಕ ಸಮಸ್ಯೆಗಳು ಬಂದು ಅದೆಲ್ಲಾ ಬಗೆಹರಿದ ಬಳಿಕ 2022ರಲ್ಲಿ ವಿವಾಹ ಆದೆವು. ಆದರೆ ವಿವಾಹದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ನನ್ನನ್ನು ಗೋಲ್ಡ್​ ಡಿಗ್ಗರ್​ ಎಂದು ಟ್ಯಾಗ್​ ಮಾಡುತ್ತಿದ್ದರು. ನನ್ನ ಮತ್ತು ಫರ್ಹಾನ್​ ಅಖ್ತರ್​​​ ಪೋಟೋಗೆ ಲವ್​ ಜಿಹಾದ್​ ಎಂದು ಕಾಮೆಂಟ್​ ಬರುತಿತ್ತು. ಆದರೆ ಇಂತಹ ಕಾಮೆಂಟ್​ಗಳ ಬಗ್ಗೆ ನಾನು ಗಮನ ಹರಿಸುವುದಿಲ್ಲ. ಮತ್ತು ಈ ರೀತಿಯ ಟ್ರೋಲ್​ಗಳನ್ನು ಶಿಬಾನಿ ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಮಾಡುವ ಕಾಮೆಂಟ್​ಗಳು ಸತ್ಯವಿಲ್ಲದಿದ್ದರೆ ಹೇಗೆ ಪ್ರಭಾವ ಬೀರಲು ಸಾಧ್ಯ. ಆ ಕಾಮೆಂಟ್‌ಗಳಿಗೆ ಅಥವಾ ಜನರು ಏನು ಹೇಳಿದ್ದಾರೆ ಅದಕ್ಕೆ ಯಾವುದೆ ಆಧಾರ ಇಲ್ಲದಿದ್ದರೆ ಹೇಗೆ ಸುಳ್ಳು ವಿಷ್ಯ ನಿಮ್ಮ ಮೇಲೆ ಪ್ರಭಾವಬೀರಲು ಸಾಧ್ಯ. ನಾನು ಫರ್ಹಾನ್ ಜತೆ ನನ್ನ ಸಂಬಂಧವನ್ನು ಪ್ರಾರಂಭಿಸಿದಾಗ ಪ್ರತಿದಿನ ಜನರು ನನಗೆ ಈ ಎರಡು ವಿಷಯಗಳನ್ನು ಹೇಳುತ್ತಿದ್ದರು, 'ಲವ್ ಜಿಹಾದ್ ಮತ್ತು ಗೋಲ್ಡ್ ಡಿಗ್ಗರ್' ಎಂದು ಟೀಕಿಸುತ್ತಿದ್ದರು. ಇದಕ್ಕೆ ನಾನು ಏನು ಮಾಡಬೇಕು. ಅಸಲಿಗೆ ಜನರು ಹೀಗೆ ಟೀಕಿಸಲು ಕಾರಣ ನಾನು ಹಿಂದೂ ಆದರೆ ಫರ್ಹಾನ್​​ ಮುಸ್ಲಿಂ ಕುಟುಂಬದಿಂದ ಬಂದವನು. ನಾವು ಮದುವೆಯಾದೇವು. ನಮ್ಮ ಜೀವನ ಸಂತೋಷವಾಗಿದೆ. ಜನರು ಏನು ಬೇಕಾದರೂ ಹೇಳಬಹುದು ಎಂದು ತಿಳಿಸಿದರು.

ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಫರ್ಹಾನ್‌ನೊಂದಿಗೆ ಹೋಲಿಸಿ ಮಾತನಾಡುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಕಾಮೆಂಟ್​ಗಳನ್ನು ಓದುತ್ತೇನೆ. ಫರ್ಹಾನ್ ಅವರನ್ನು ಭೇಟಿ ಮಾಡುವ ಮೊದಲು ತನ್ನದೇ ಆದ ಜೀವನವಿದೆ. ನಾನು ಅವನನ್ನು ಮದುವೆಯಾಗುವ ಮೊದಲು ನನಗೆ ಅಸ್ತಿತ್ವ ಇರಲಿಲ್ಲವೇ. ಫರ್ಹಾನ್​​ನನ್ನು ಮದುವೆ ಆಗುವ ಮುನ್ನ 39 ವರ್ಷಗಳು ನನ್ನ ಜೀವನ ನಡೆದಿದೆ. ನನಗೆ ತಿಳಿದಿದೆ, ನಾನು ವ್ಯಕ್ತಿಯನ್ನು ನಂಬುತ್ತೇನೆ ಅಥವಾ ನನ್ನ ಸ್ವಂತ ಪ್ರಯಾಣವನ್ನು ನಂಬುತ್ತೇನೆ. ಟ್ರೋಲ್‌ಗಳು ಭಾವನಾತ್ಮಕವಾಗಿ ಹೊಡೆಯಲು ಏನು ಬೇಕಾದರೂ ಹೇಳುತ್ತಾರೆ. ಅದನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದರು. ಶಿಬಾನಿ ಫೆಬ್ರವರಿ 2022ರಲ್ಲಿ ಅವರ ಖಂಡಾಲಾ ಫಾರ್ಮ್‌ಹೌಸ್‌ನಲ್ಲಿ ಖಾಸಗಿ ಸಮಾರಂಭದಲ್ಲಿ ಫರ್ಹಾನ್ ಅವರನ್ನು ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾದರು. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net