162 ಗ್ರಾಂ. ಚಿನ್ನಾಭರಣ, 10 ಲಕ್ಷ ರೂ. ನಗದು ಅಪಹರಣ
ಮಾಗಡಿ: ತಾಲೂಕಿನ ಮಾಡಬಾಳ್ ಹೋಬಳಿ ನಾಯಕನಪಾಳ್ಯ ಗ್ರಾಮದಲ್ಲಿ ಭಾನುವಾರ ಹಾಡಹಗಲೇ ಮನೆಯ ಶೀಟ್ ಒಡೆದು ಒಳ ನುಸುಳಿರುವ ಕಳ್ಳರುಚಿನ್ನಾಭರಣ, ಲಾಂತರ ರೂ. ನಗದು ದೋಚಿದ್ದಾರೆ.
ಹಂಚಿಕುಪ್ಪೆ ಗ್ರಾಮಪಂಚಾಯಿತಿ ಸದಸ್ಯ ನರಸಿಂಹ ನಾಯ್ಕ್ ಎಂಬುವರ ಮನೆಯ ಸಿಮೆಂಟ್ ಶೀಟ್ ಒಡೆದು ಕೃತ್ಯ ಎಸಗಲಾಗಿದೆ.
ನರಸಿಂಹನಾಯ್ಕ್ ಸಾವನದುರ್ಗ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದ ಆವರಣದಲ್ಲಿ ಹೂವು& ಹಣ್ಣಿನ ಅಂಗಡಿ ತೆರೆದಿದ್ದು, ಪ್ರತಿ ನಿತ್ಯದಂತೆ ಮನೆಗೆ ಬೀಗ ಹಾಕಿಕೊಂಡು ಭಾನುವಾರವೂ ಅಂಗಡಿಗೆ ತೆರಳಿದ್ದಾರೆ. ಸಂಜೆ ಮನೆಗೆ ವಾಪಸ್ ಬಂದ ವೇಳೆ ಕಳ್ಳತನ ಮಾಡಿರುವುದು ಗೊತ್ತಾಗಿದೆ.
ಮಾಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.