’ಶೆಡ್‌ಗೆ ಬೆಂಕಿ’ ಕಾರು, ನಾಲ್ಕು ಬೈಕ್‌ಗಳು ಭಸ್ಮ

12-APR-GPT-2
ಗುಂಡ್ಲುಪೇಟೆ ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ದುಷ್ಕರ್ಮಿಗಳು ಹಚ್ಚಿದ ಬೆಂಕಿಗೆ ಕಾರು ಮತ್ತು ಬೈಕುಗಳು ಸುಟ್ಟು ಹೋಗಿವೆ.
Published on

ಗುಂಡ್ಲುಪೇಟೆ: ತಾಲೂಕಿನ ಮಡಹಳ್ಳಿ ಗ್ರಾಮದಲ್ಲಿ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಒಂದು ಕಾರು ಮತ್ತು ನಾಲ್ಕು ಬೈಕುಗಳು ಸುಟ್ಟು ಭಸ್ಮವಾಗಿವೆ.

ಗ್ರಾಮದ ಸಿದ್ದರಾಜು ಎಂಬುವರು ಅದೇ ಗ್ರಾಮದ ಪುಟ್ಟನಂಜಪ್ಪ ಎಂಬುವರಿಗೆ ಸೇರಿದ ಖಾಲಿ ಜಾಗದಲ್ಲಿ ಶೆಡ್ ನಿರ್ಮಿಸಿಕೊಂಡು ಮರಗೆಲಸ ಮಾಡುತ್ತಿದ್ದರು. ಅಲ್ಲಿ ತಮ್ಮ ಕಾರು ಹಾಗೂ ಬೈಕ್ ನಿಲ್ಲಿಸಿಕೊಳ್ಳುತ್ತಿದ್ದರು. ಮನೆಗಳಲ್ಲಿ ಪಾರ್ಕಿಂಗ್ ಮಾಡಲು ಸ್ಥಳಾವಕಾಶವಿಲ್ಲದ ಕೆಲವು ಯುವಕರು ತಮ್ಮ ಬೈಕುಗಳನ್ನು ಇಲ್ಲಿಯೇ ನಿಲ್ಲಿಸುತ್ತಿದ್ದರು. ಶುಕ್ರವಾರ ರಾತ್ರಿ ಎಂದಿನಂತೆ ಕಾರು ಬೈಕುಗಳನ್ನು ನಿಲ್ಲಿಸಿದ್ದರು.

ಶನಿವಾರ ನಸುಕಿನಲ್ಲಿ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದರಿಂದ ಕಾರು, ನಾಲ್ಕು ಬೈಕುಗಳೊಂದಿಗೆ ಶೆಡ್ ಸಂಪೂರ್ಣ ಭಸ್ಮವಾಗಿದೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net