ಧಮ್​ ಎಳೆಯೋದಕ್ಕೆ ಈಕೆಗೆ ದಿನಕ್ಕೆ 1.5 ಲಕ್ಷ ರೂ. ಸಂಬಳ....! ಸೋಷಿಯಲ್​ ಮೀಡಿಯಾದಿಂದ ಆದ್ಳು ಬ್ರಾಂಡ್​ ಅಂಬಾಸಿಡರ್​

WEED
Published on

ನವದೆಹಲಿ: ವಿಚಿತ್ರ, ವಿಲಕ್ಷಣ, ಅಸಹಜವೆನ್ನಿಸುವ ಕೆಲಸಗಳು ಕೆಲವೊಮ್ಮೆ ಭಾಗ್ಯದ ಬಾಗಿಲನ್ನೇ ತೆರೆಯಬಲ್ಲವು ಎಂಬುದಕ್ಕೆ ಇಲ್ಲಿದೆ ಇನ್ನೊಂದು ನಿದರ್ಶನ.

ಅಮೆರಿಕ ಕ್ಯಾಲಿಪೋರ್ನಿಯಾದ ನಿವಾಸಿಯಾಗಿರುವ ಯುವತಿಯೊಬ್ಬಳು ಖಿನ್ನತೆ ಹಾಗೂ ಒತ್ತಡಕ್ಕೆ ಒಳಗಾಗಿದ್ದಳು. ಇದನ್ನು ಮರೆಯಲೆಂದೇ ಆಕೆ ಸಾಮಾಜಿಕ ಜಾಲ ತಾಣಗಳತ್ತ ಆಕರ್ಷಿತಳಾದಳು. ಅದೇ ಅವಳಿಗೆ ಹೊಸ ಉದ್ಯೋಗವನ್ನು ದೊರಕಿಸಿಕೊಟ್ಟಿತು.

ಈ ಮೊದಲು ಆಕೆ ಹೋಟೆಲ್​ವೊಂದರಲ್ಲಿ ಪರಿಚಾರಕಿಯಾಗಿ ದಿನಕ್ಕೆ 500-600 ರೂ. ಸಂಪಾದಿಸುತ್ತಿದ್ದಳು. ಈಗ ಈಕೆಯ ತಿಂಗಳ ಆದಾಯ ಬರೋಬ್ಬರಿ 60,000 ಡಾಲರ್​ಗಳು. ಅಂದಾಜು 45 ಲಕ್ಷ ರೂಪಾಯಿಗಳು ಅಂದರೆ ದಿನಕ್ಕೆ ಒಂದೂವರೆ ಲಕ್ಷ ರೂ.ಗೂ ಅಧಿಕ ಸಂಪಾದನೆ ಮಾಡುತ್ತಿದ್ದಾಳೆ. ಅಂದಹಾಗೆ ಕ್ಯಾಲಿಫೋರ್ನಿಯಾದಲ್ಲಿ ಮನರಂಜನಾ ಉದ್ದೇಶಕ್ಕೆ ಗಾಂಜಾ ಸೇವನೆಗೆ ಅವಕಾಶವಿದೆ.

ಇಷ್ಟಕ್ಕೂ ಆಕೆಯ ಕೆಲಸವೆಂದರೆ, ಇನ್​ಸ್ಟಾಗ್ರಾಂ ನಲ್ಲಿ ಗಾಂಜಾ ಎಳೆಯೋದು. ತನ್ನನ್ನು ಸೀಕೀ ಎಂದು ಕರೆದುಕೊಂಡಿದ್ದಾಳೆ. ಈಕೆಗೆ ಇನ್​​ಸ್ಟಾಗ್ರಾಂನಲ್ಲಿ 2.38 ಲಕ್ಷ ಫಾಲೋವರ್​ಗಳಿದ್ದಾರೆ. ಈ ಜನಪ್ರಿಯತೆಯೇ ಆಕೆಗೆ ಗಳಿಕೆಯ ಮಾರ್ಗವೂ ಆಗಿದೆ. ಅಷ್ಟಕ್ಕೂ ಈಕೆ ಈ ದುಡ್ಡು ಕೊಡ್ತಾ ಇರೋ ಕಂಪನಿ ಹೆಸರು ರಾ (RAW) ರೋಲಿಂಗ್​ ಪೇಪರ್ಸ್​. ಇದು ಗಾಂಜಾ ಸುರುಳಿ ಸುತ್ತಲು ಬಳಸುವ ಕಾಗದ ತಯಾರಿಸುವ ಕಂಪನಿ. ಈ ಸಂಸ್ಥೆಗೆ ಈಕೆ ಬ್ರಾಂಡ್​ ಅಂಬಾಸಿಡರ್​ ಆಗಿದ್ದಾಳೆ.

ಇದನ್ನೂ ಓದಿ; ಮಾರಕ ಕರೊನಾಗೆ ನಂಜನಗೂಡಿನಲ್ಲಿ ತಯಾರಾಗುತ್ತಿರುವ ಲಸಿಕೆ ಬಳಕೆಗೆ ಅನುಮತಿ

ದಿನಕ್ಕೆ ಇಪ್ಪತ್ತು 20 ಜಾಯಿಂಟ್ಸ್​ (ಧಮ್​ ಎಂದು ಕರೆಯಬಹುದೇನೋ) ಗಾಂಜಾ ಸೇವನೆ ಆಕೆಯನ್ನು ಶಾಂತವಾಗಿಸುತ್ತದೆಯಂತೆ. ಮಾನಸಿಕ ನೆಮ್ಮದಿ ಸಿಗುತ್ತಂತೆ..!

ತಜ್ಞರು ಹೇಳುವ ಪ್ರಕಾರ ಒಂದು ಜಾಯಿಂಟ್​ ಗಾಂಜಾ ಸೇದಿದರೆ 20 ಸಿಗರೇಟ್​ ಸೇವನೆಗೆ ಸಮ. ಅಂಥದ್ದರಲ್ಲಿ ಈಕೆ ಇಪ್ಪತ್ತು ಜಾಯಿಂಟ್​ ಗಾಂಜಾ ಸೇವಿಸಿದರೆ ದಿನಕ್ಕೆ 400 ಸಿಗರೇಟ್​ ಸೇವಿಸದಂತಾಯ್ತು....!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net