ಹೊಟ್ಟೆನೋವೆಂದು ಆಸ್ಪತ್ರೆಗೆ ತೆರಳುತ್ತಿದ್ದಾಗ ಅಪಘಾತ

sarmila mandre
Published on

ಬೆಂಗಳೂರು: ಏ.4ರಂದು ಮೌಂಟ್ ಕಾರ್ವೆಲ್ ಕಾಲೇಜು ಬಳಿಯ ರೈಲ್ವೆ ಅಂಡರ್ ಪಾಸ್​ನಲ್ಲಿ ಪಿಲ್ಲರ್​ಗೆ ಕಾರು ಡಿಕ್ಕಿ ಪ್ರಕರಣ ಸಂಬಂಧ ತನಿಖಾಧಿಕಾರಿಗಳು ನಟಿ ಶರ್ವಿುಳಾ ಮಾಂಡ್ರೆ ಹೇಳಿಕೆ ಪಡೆದಿದ್ದಾರೆ.

ಅಪಘಾತದ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಶರ್ವಿುಳಾ ಮಾಂಡ್ರೆ, ಗುಣಮುಖಗೊಂಡ ಬಳಿಕ ತನಿಖಾಧಿಕಾರಿ ಗಳ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಅಂದು ರಾತ್ರಿ ಹೊಟ್ಟೆ ನೋವು ಇದ್ದ ಕಾರಣಕ್ಕೆ ಸ್ನೇಹಿತರ ಕಾರು ತರಿಸಿಕೊಂಡು ಆಸ್ಪತ್ರೆಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಅಪಘಾತ ಸಂಭವಿಸಿದಾಗ ಕಾರನ್ನು ಡಾನ್ ಥಾಮಸ್ ಡ್ರೖೆವಿಂಗ್ ಮಾಡುತ್ತಿದ್ದರು. ಆತನ ಪಕ್ಕದಲ್ಲಿ ಯುವತಿ ಕುಳಿತಿದ್ದಳು. ಚಾಲಕನ ಹಿಂಬದಿ ಸೀಟಿನಲ್ಲಿ ಶರ್ವಿುಳಾ ಹಾಗೂ ಲೋಕೇಶ್ ವಸಂತ್ ಕುಳಿತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಚಾಲಕನಿಗೆ ಈಗಾಗಲೇ ಜಾಮೀನು ದೊರೆತಿದೆ. ಕೋವಿಡ್-19 ಪಾಸ್ ದುರುಪಯೋಗಪಡಿಸಿಕೊಂಡ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net