

ಶ್ರೀನಗರ: ಮೂರು ದಶಕಗಳ ಬಳಿಕ ಜಮ್ಮು ಮತ್ತು ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಶಾರದಾ ಭವಾನಿ ದೇವಾಲಯವನ್ನು ಕಾಶ್ಮೀರಿ ಪಂಡಿತ ಸಮುದಾಯ ಇಂದು (ಆ.31) ಮತ್ತೆ ತೆರೆದಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯ ಮುಸ್ಲಿಂ ಸಮುದಾಯದವರು ಈ ಆಚರಣೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ.
ಮಹೂರ್ತ ಮತ್ತು ಪ್ರಾಣ ಪ್ರತಿಷ್ಠೆಯ ಈ ಸಮಾರಂಭವನ್ನು ಮಧ್ಯ ಕಾಶ್ಮೀರದ ಇಚ್ಕೂಟ್ ಗ್ರಾಮದಲ್ಲಿ ನೆರವೇರಿಸಲಾಯ್ತು. 1990 ರ ದಶಕದ ಆರಂಭದಲ್ಲಿ ಕಾಶ್ಮೀರ ಕಣಿವೆಯಲ್ಲಿ ಉಗ್ರಗಾಮಿತ್ವ ಭುಗಿಲೆದ್ದ ಬಳಿಕ ಮೊದಲ ಬಾರಿಗೆ ಕಾಶ್ಮೀರಿ ಪಂಡಿತ ಕುಟುಂಬಗಳ ಗುಂಪು ತಮ್ಮ ಪೂರ್ವಜರ ಸ್ಥಳಕ್ಕೆ ಮರಳಿದೆ.
ಇನ್ನೂ ಈ ಬಗ್ಗೆ ಬುಡ್ಗಾಮ್‌ನ ಶಾರದಾ ಅಸ್ಥಾಪ್ನ ಸಮುದಾಯದ ಅಧ್ಯಕ್ಷ ಸುನಿಲ್ ಕುಮಾರ್ ಭಟ್ ಪ್ರತಿಕ್ರಿಯಿಸಿದ್ದು, ಇದು ಪಾಕಿಸ್ತಾನದಲ್ಲಿರುವ ಶಾರದಾ ಮಾತಾ ದೇವಾಲಯದ ಒಂದು ಶಾಖೆಯಾಗಿದೆ. ನಾವು ಬಹಳ ದಿನಗಳಿಂದ ಈ ದೇವಾಲಯವನ್ನು ಮತ್ತೆ ಸ್ಥಾಪಿಸಲು ಬಯಸುತ್ತಿದ್ದೆವು. ಸ್ಥಳೀಯ ಮುಸ್ಲಿಮರು ಸಹ ಈ ಬಗ್ಗೆ ಆಸಕ್ತಿ ಹೊಂದಿದ್ದರು. ಸ್ವತಃ ಅವರೇ ಬಂದು ದೇವಾಲಯವನ್ನು ಪುನಃ ಸ್ಥಾಪಿಸಲು ನಮಗೆ ಹೇಳುತ್ತಿದ್ದರು ಸುನಿಲ್ ಕುಮಾರ್ ಹೇಳಿದ್ದಾರೆ.
(ಏಜೆನ್ಸೀಸ್)
ಪಂಡಿತ ಸಮುದಾಯವು 35 ವರ್ಷಗಳ ಬಳಿಕ ದೇವಾಲಯವನ್ನು ಮತ್ತೆ ತೆರೆದಿದೆ. ಸಮುದಾಯದ ಸದಸ್ಯರು ಬೇಗ ಕಾಶ್ಮೀರಕ್ಕೆ ಮರಳಲಿ ಎಂದು ನಾವು ಮಾತಾ ರಾಣಿಯನ್ನು ಪ್ರಾರ್ಥಿಸುತ್ತೇವೆ. ಪ್ರಧಾನ ಮಂತ್ರಿ ಪ್ಯಾಕೇಜ್ ಅಡಿಯಲ್ಲಿ ಕೆಲಸ ಮಾಡುತ್ತಿರುವ ಕೆಲ ಕಾಶ್ಮೀರಿ ಪಂಡಿತರು ದೇವಾಲಯವನ್ನು ಪುನಃ ಸ್ಥಾಪಿಸಿದರು ಮತ್ತು ಹಳೆಯ ದೇವಾಲಯವು ಹಾಳಾಗಿರುವುದರಿಂದ ಹೊಸ ದೇವಾಲಯ ನಿರ್ಮಿಸಲು ಜಿಲ್ಲಾಡಳಿತವನ್ನು ಸಂಪರ್ಕಿಸಲಾಗುತ್ತಿದೆ. ಸ್ಥಳೀಯ ಮುಸ್ಲಿಮರು ಆಚರಣೆಗಳಲ್ಲಿ ಸೇರಿಕೊಂಡಿದ್ದರಿಂದ ಪುನಃ ಉದ್ಘಾಟನೆ ಸಮಾರಂಭವು ಕಣಿವೆಯ ಪ್ರಸಿದ್ಧ ಸಂಯೋಜಿತ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಸ್ಥಳೀಯ ಸಮುದಾಯವಿಲ್ಲದೆ, ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಭಟ್ ಹೇಳಿದರು.