ಹೊಸಕೋಟೆ ಪಕ್ಷೇತರ ಶಾಸಕ ಶರತ್​ ಬಚ್ಚೇಗೌಡರಿಂದ ಸ್ವಚ್ಛತಾ ಕಾರ್ಯ; ಅಧಿಕಾರಿಗಳಿಂದ ಸಾಥ್​

Sharat Bacchegowda 4 Jan 20
Published on

ಹೊಸಕೋಟೆ: ಇಲ್ಲಿನ ಪಕ್ಷೇತರ ಶಾಸಕ ಶರತ್​ ಬಚ್ಚೇಗೌಡ ಅವರು ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ನಡೆಸಿದರು.

ಬೆಳ್ಳಂಬೆಳಗ್ಗೆ ಅಧಿಕಾರಿಗಳೊಟ್ಟಿಗೆ ಸೇರಿ ಹೊಸಕೋಟೆ ನಗರದ ಪೊಲೀಸ್​ ಠಾಣೆ ವೃತ್ತದಿಂದ ವಿವೇಕಾನಂದ ನಗರದವರೆಗೂ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.

ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಎಂಟಿಬಿ ವಿರುದ್ಧ ಗೆಲುವು ಸಾಧಿಸಿರುವ ಶರತ್​ ಬಚ್ಚೇಗೌಡ ಸ್ವಚ್ಛ ಹೊಸಕೋಟೆ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net