

ತುಮಕೂರು: ಬಿಬಿಸಿ ಗುಜರಾತ್ ಹತ್ಯಾಕಾಂಡದ ಕಿರುಚಿತ್ರ ಬಿಡುಗಡೆ ಮಾಡಿದ ಬೆನ್ನಲ್ಲೇ, ವಿಶ್ವಹಿಂದೂ ಪರಿಷತ್ ಪ್ರಾಂತ್ಯ ಕಾರ್ಯದರ್ಶಿ ಶರಣ ಪಂಪವೆಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಶರಣ್ ಪಂಪವೆಲ್ ಮಾತನಾಡುತ್ತಾ, ಗುಜರಾತ್ ದುರಂತವನ್ನು ಹಿಂದುಗಳ ಪರಾಕ್ರಮಕ್ಕೆ ಹೋಲಿಸಿದ್ದಾರೆ. 59 ಜನ ಕರಸೇವಕರ ಹತ್ಯೆಗೆ ಪ್ರತಿಕಾರವಾಗಿ 2 ಸಾವಿರ ಜನರ ಹತ್ಯೆ ಮಾಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದೀಗ ಶರಣ್ ಪಂಪ್ವೆಲ್ ಮಾತಿಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಗುಜರಾತ್ ಹತ್ಯಾಕಾಂಡ ಹಿಂದುಗಳ ಪರಾಕ್ರಮ. ಹಿಂದುಗಳು ಷಂಡರಲ್ಲ ಎಂಬುದನ್ನು ಈ ಘಟನೆ ತೋರಿಸುತ್ತದೆ. ಹಿಂದು ಸಮಾಜ ಯಾವತ್ತೂ ನಪುಂಸಕ ಸಮಾಜ ಅಲ್ಲ. ನಾವು ನಮ್ಮ ಸಾಮರ್ಥ್ಯವನ್ನು ಜಗತ್ತಿಗೆ ತೋರಿಸಿದ್ದೇವೆ ಎಂದು ತುಮಕೂರಿನಲ್ಲಿ ನಡೆದ ಬಜರಂಗದ ದಳದ ಶೌರ್ಯ ಯಾತ್ರೆಯಲ್ಲಿ ಹೇಳಿಕೆ ನೀಡಿದ್ದಾರೆ.
ಗುಜರಾತ್ ಘಟನೆಯನ್ನು ಒಂದು ಸಲ ನೆನೆಪು ಮಾಡಿಕೊಳ್ಳಿ. ಅಯೋದ್ಯೆಯ ಮಂದಿರಕ್ಕಾಗಿ 58 ಜನರು ಕರ ಸೇವೆಗೋಸ್ಕರ ರೈಲಿನಲ್ಲಿ ಬರಬೇಕಾದರೆ, ಆ ರೈಲನ್ನು ಸುಟ್ಟು 59 ಕರ ಸೇವಕರ ಹತ್ಯೆ ಮಾಡಿದರು. ಅದರ ಬಳಿಕ ಗುಜರಾತ್ ಯಾವ ರೀತಿಯ ಉತ್ತರ ಕೊಟ್ಟಿತು ಎಂಬುದನ್ನು ನೆನಪಿಸಿಕೊಳ್ಳಿ ಎಂದರು.
ಯಾವ ಹಿಂದು ಕೂಡ ಮನೆಯಲ್ಲಿ ಕುಳಿತಿಲ್ಲ. ರಸ್ತೆಗೆ ಇಳಿದ್ರು...ಮನೆ ಮನೆಗೆ ನುಗ್ಗಿದ್ರು... ಕರಸೇವಕರ ಹತ್ಯೆ ನಡೆದಿದ್ದು 59 ಆದರೆ... ನಂತರ ಗುಜರಾತಿನಲ್ಲಿ ನಡೆದ ಹತ್ಯೆಯ ಸಂಖ್ಯೆ ಇನ್ನೂ ಲೆಕ್ಕ ಸಿಕ್ಕಿಲ್ಲ. ಅಂದಾಜು ಸುಮಾರು 2 ಸಾವಿರ ಹತ್ಯೆಯಾಗಿದೆ. ಇದು ಹಿಂದುಗಳ ಪರಾಕ್ರಮ ಎಂದು ಹೇಳಿಕೊಂಡಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳು ಹಿಂದುತ್ವದ ಫ್ಯಾಕ್ಟರಿ ಆಗಲಿದೆ ಎಂದ ಮಾಜಿ ಸಿಎಂ ಸಿದ್ದರಾಮಯ್ಯಗೆ ಸವಾಲ್ ಹಾಕಿದ ಶರಣ್ ಪಂಪ್ವೆಲ, ಅನಿವಾರ್ಯ ಅವಶ್ಯಕತೆ ಬಂದರೆ ಹೊಡೆದಾಟ ಮಾಡುತ್ತೇವೆ. ನುಗ್ಗಿ ಹೊಡೆದೇ ಹೊಡೆಯಲೂ ಸಿದ್ಧ. ಸಿದ್ದರಾಮಯ್ಯನವರು ನಮ್ಮ ನೆಲ ಮಂಗಳೂರಿಗೆ ಬಂದು, ದಕ್ಷಿಣ ಕನ್ನಡ ಜಿಲ್ಲೆ ಹಿಂದುತ್ವದ ಫ್ಯಾಕ್ಟರಿ ಆಗಿದೆ ಎನ್ನುತ್ತಾರೆ. ಸಿದ್ದರಾಮಯ್ಯನವರೇ ನೆನಪಿರಲಿ, ದಕ್ಷಿಣ ಕನ್ನಡ ಜಿಲ್ಲೆ ಮಾತ್ರ ಅಲ್ಲ...ಮುಂದಿನ ದಿನಗಳಲ್ಲಿ ತುಮಕೂರು ಜಿಲ್ಲೆ ಕೂಡ ಹಿಂದುತ್ವದ ಫ್ಯಾಕ್ಟರಿ ಆಗಲಿದೆ. ಬಜರಂಗದಳ ಶೌರ್ಯ ಯಾತ್ರೆಯ ಮೂಲಕ ತುಮಕೂರಿನಲ್ಲಿ ಸಂಚಲನ ಮೂಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳು ಹಿಂದುತ್ವದ ಫ್ಯಾಕ್ಟರಿ ಆಗಲಿದೆ ಎಂದರು.