ಶರಣ ಗೆಜ್ಜಗಾರ ಘಟ್ಟಿವಾಳಯ್ಯ ಜಯಂತಿ ಅದ್ದೂರಿ

ರಾಜ್ಯ ಗೆಜ್ಜಗಾರ ರಕ್ಷಣಾ ಸಮಿತಿ ವತಿಯಿಂದ ಶರಣ ಗೆಜ್ಜಗಾರ ಘಟ್ಟಿವಾಳಯ್ಯ ಜಯಂತಿಯನ್ನು ನಂಜನಗೂಡಿನಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಹಲ್ಲರೆ ಶಿವಬುದ್ದಿ, ಶ್ರೀ ಬಸವಯೋಗಿ ಪ್ರಭು , ಚಿಕ್ಕರಂಗನಾಯಕ, ಮಲ್ಲೇಶ್, ರಂಗಸ್ವಾಮಿ, ಕೋಟೆ ಮಹಾದೇವ ಇತರರಿದ್ದರು.

Published on

ನಂಜನಗೂಡು: ರಾಜ್ಯ ಗೆಜ್ಜಗಾರ ರಕ್ಷಣಾ ಸಮಿತಿ ವತಿಯಿಂದ ಪಟ್ಟಣದಲ್ಲಿ ಶರಣ ಗೆಜ್ಜಗಾರ ಶ್ರೀ ಘಟ್ಟಿವಾಳಯ್ಯ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಶ್ರೀ ಘಟ್ಟಿವಾಳಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಮೆರವಣಿಗೆಗೆ ವಚನ ಸಾಹಿತ್ಯ ಚಿಂತಕ ಹಲ್ಲರೆ ಶಿವಬುದ್ದಿ, ಶ್ರೀ ಬಸವಯೋಗಿ ಪ್ರಭು , ಮಾಜಿ ಜಿಪಂ ಸದಸ್ಯ ಚಿಕ್ಕರಂಗನಾಯಕ, ಸಮಿತಿ ಅಧ್ಯಕ್ಷ ಮಲ್ಲೇಶ್, ಗೌರವಾಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ಕೋಟೆ ಮಹಾದೇವ ಚಾಲನೆ ನೀಡಿದರು.

ನಗರದ ಪ್ರಮುಖ ರಸ್ತೆಗಳಲ್ಲಿ ವಿವಿಧ ಜಾನಪದ ಕಲಾತಂಡಗಳೊಂದಿಗೆ ಅದ್ದೂರಿಯಾಗಿ ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ತನಕ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಗೆಜ್ಜಗಾರ ರಕ್ಷಣಾ ಸಮಿತಿಯ ಎಚ್.ಡಿ.ಕೋಟೆ ತಾಲೂಕು ಘಟಕ, ನಂಜನಗೂಡು ತಾಲೂಕು ಘಟಕ, ಹುಲ್ಲಳ್ಳಿ ಹೋಬಳಿ ಘಟಕ, ಹೊಸವೀಡು ಘಟಕ, ಹಿರಿಯೂರು ಗ್ರಾಮ ಘಟಕದ ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net