ಶಾಂತಿಮಂತ್ರವೇ ಧರ್ಮದ ಮೂಲ

NY Gopalakrishna
Published on

ಮೊಳಕಾಲ್ಮೂರು: ಯಾವುದೇ ಧರ್ಮ, ಜಾತಿಯ ಮೂಲ ಆಶಯ ಶಾಂತಿ, ನೆಮ್ಮದಿ ಆಗಿರುತ್ತದೆ. ದೇವರ ಆರಾಧನೆಯಲ್ಲಿ ಭಕ್ತಿ ಇರಬೇಕು. ಶಾಂತಿ, ಸೌಹಾರ್ದ ಬುನಾದಿ ಆಗಿರಬೇಕು. ಆಗ ನಮ್ಮ ಭಕ್ತಿ ದೇವರಿಗೆ ತಲುಪಲಿದೆ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಗಣಪತಿ ಮೆರವಣಿಗೆಗೆ ಚಾಲನೆ ನೀಡಿದ ಮಾತನಾಡಿ, ಸೌಹಾರ್ದ, ಸಹಬಾಳ್ವೆ ಜೀವನಕ್ಕೆ ಮೊಳಕಾಲ್ಮೂರು ಜನರು ಮಾದರಿ ಆಗಿದ್ದಾರೆ. ಸಂಘರ್ಷ, ಅಹಿತರ ಘಟನೆಗಳಿಗೆ ಅವಕಾಶ ಕಲ್ಪಿಸದೆ ಬದ್ಧತೆ, ಭಕ್ತಿಯಿಂದ ಗಣೇಶೋತ್ಸವವನ್ನು ಪ್ರತಿ ವರ್ಷ ಆಚರಿಸುತ್ತಿರುವುದು ನಮ್ಮೆಲ್ಲರ ಹೆಮ್ಮೆ ಆಗಿದೆ ಎಂದರು.

ದೊಡ್ಡಸಿದ್ದವ್ವನಹಳ್ಳಿಯಲ್ಲಿ ಇಂದು: ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿಯಲ್ಲಿ ಗೆಳೆಯರ ಬಳಗ ಪ್ರತಿಷ್ಠಾಪಿಸಿರುವ ಗಣಪತಿ ವಿಸರ್ಜನೆ ಮೆರವಣಿಗೆ ಸೆ.26ರ ಸೋಮವಾರ ಗ್ರಾಮದಲ್ಲಿ ನಡೆಯಲಿದೆ.

ಆಂಜನೇಯ ದೇವಸ್ಥಾನದಿಂದ ಮೆರವಣಿಗೆ ಆರಂಭವಾಗಲಿದೆ. ಪ್ರಸಾದ ವಿತರಣೆ, ವಿವಿಧ ಪೂಜಾ ಕಾರ್ಯಗಳು ಹಮ್ಮಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net